ಮೈಸೂರು,ಸೆ,21,2019(www.justkannada.in): ಜೆಡಿಎಸ್ ನಾಯಕರಲ್ಲಿನ ಶೀತಲ ಸಮರ ಮುಂದುವರೆದಿದ್ದು,ಈ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಜಿ.ಟಿ ದೇವೇಗೌಡರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಹಾಕಿ ಕಿಡಿಕಾರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸೋತು ಮನೇಲಿ ಕುತಾಗ ಅಧಿಕಾರ ತ್ಯಾಗ ಮಾಡಬಹುದಿತ್ತು ಅಲ್ಲವೇ. ನೀವು ರಾಜೀನಾಮೆ ನೀಡಿ ಕಾಂಗ್ರೆಸ್ನವರನ್ನು ಸಿಎಂ ಮಾಡಿ, ರೇವಣ್ಣನವರನ್ನು ಡಿಸಿಎಂ ಮಾಡಬಹುದಿತ್ತು ಅಲ್ಲವೇ…? ಆಗ ಸರ್ಕಾರವೂ ಉಳಿಯುತ್ತಿತ್ತು ಅಲ್ಲವೇ..? ಕಾರ್ಯಕರ್ತರೂ ಉಳಿಯುತ್ತಿದ್ರು ಅಲ್ಲವೇ…? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಜಿ.ಟಿ ದೇವೇಗೌಡರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ.ಟಿ ದೇವೇಗೌಡರು ಹೇಳಿದ್ದಿಷ್ಟು…?
ನೀವು ಸಿಎಂ ಆಗಿದ್ದಾಗ ಮಂತ್ರಿಗಳು ನಿಮ್ಮನ್ನು ಭೇಟಿ ಮಾಡಬೇಕಾದರೆ ಆ ಹೋಟೆಲ್ ಬಳಿ ಕಾಯಬೇಕಿತ್ತು. ನಿಮ್ಮ ಪಿಎ ಸತೀಶ್ ಪೋನ್ ಮಾಡೋವರೆಗೂ ಗೇಟ್ ಕಾಯಬೇಕಾಗಿತ್ತು. ಇದೆಲ್ಲಾ ಮರೆತು ಹೋಯ್ತಾ ಕುಮಾರಣ್ಣ…? ಕುಮಾರಣ್ಣ ನನಗೆ ವಿಶ್ರಾಂತಿ ಬೇಕು ಅಂತೀರಲ್ಲ, ಅಮೇರಿಕಾಕ್ಕೆ ಹೋಗಿದ್ದು ನಾನಾ, ನೀವಾ. ನೀವು ಎರಡು ಬಾರಿ ಅಮೇರಿಕಾಕ್ಕೆ ಹೋದ್ರಲ್ಲ ಆವಾಗ ನನ್ನ ಕರೆದುಕೊಂಡು ಹೋದ್ರಾ…?ನೀವು ಕರೆದುಕೊಂಡು ಹೋಗಿದ್ದು ಯಾರನ್ನಾ, ತೇಜಸ್ವಿ ಸೂರ್ಯನಂತಹ ಯುವಕ ಸಾರಾ ಮಹೇಶ್ರನ್ನ…?ನನ್ನನ್ನು ಯಾವಾಗಲಾದ್ರು ಕರೆದುಕೊಂಡು ಹೋಗಿದ್ದೀರಾ…? ಅದಕ್ಕೆ ನನ್ನ ಕ್ಷೇತ್ರದ ಜನರ ಜೊತೆ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ. ಕ್ಷೇತ್ರದ ಜನರ ಜೊತೆ ಇರೋದೆ ನನಗೆ ಸಿಗುವ ವಿಶ್ರಾಂತಿ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಅಸಮಾಧಾನ ಹೊರಹಾಕಿದರು.
ಹುಣಸೂರು ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಉಪಚುನಾವಣೆಯ ಬಗ್ಗೆ ನಮ್ಮ ಕುಟುಂಬಕ್ಕೆ ಚಿಂತೆಯೇ ಇಲ್ಲ. ನನ್ನ ಮಗ ಹುಣಸೂರಿನಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯರನ್ನ ಸೋಲಿಸಿದ್ದಕ್ಕೆ ಅವರನ್ನ ಸಿಎಂ ಮಾಡಬೇಕಿತ್ತಾ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಜಿಟಿ ದೇವೇಗೌಡರು, ಸ್ವತಃ ಸಹೋದರ ಹೆಚ್ ಡಿ ರೇವಣ್ಣನನ್ನೆ ಸಿಎಂ ಮಾಡಿಲ್ಲ ಇನ್ನೂ ನನಗೆ ಮಾಡ್ತಾರಾ..? ನೀವೇ ಚಾಮುಂಡೇಶ್ವರಿ ಚುನಾವಣಾ ಪ್ರಚಾರದಲ್ಲಿ ಸಿಎಂಗೆ ಸಮಾನವಾದ ಸ್ಥಾನಮಾನ ನೀಡುತ್ತೇನೆ. ದೇವೇಗೌಡರನ್ನ ಗೆಲ್ಲಿಸಿ ಅಂತಾ ಹೇಳಿದ್ರಿ. ಮೈತ್ರಿ ಸರ್ಕಾರ ರಚನೆ ಆದ ಮೇಲೆ ನೀವು ನನಗೆ ಗೃಹಖಾತೆ ಕೊಡುತ್ತೇನೆ ಅಂದ್ರಿ. ನನಗೆ ಗೃಹಬೇಡ ನಾನು ರೈತರಿಗೆ ಅನುಕೂಲವಾಗುವಂತೆ ನನಗೆ ಕಂದಾಯ ಕೊಡಿ ಅಂತಾ ಕೇಳಿದೆ. ಆದ್ರೆ ನೀವೆ ನನಗೆ ಕೊಟ್ಟಿದ್ದು ಉನ್ನತ ಶಿಕ್ಷಣ ಎಂದು ಹೆಚ್,ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.
ಸಾ. ರಾ ಮಹೇಶ್ ನನ್ನ ಸಚಿವನಾಗಿ ಮಾಡೋದ್ರಲ್ಲಿ ಪ್ರಮೆಯವೇ ಇರಲಿಲ್ಲ. ಜಿಟಿಡಿ ಪರ್ಯಾಯವಾಗಿ ಬೆಳೆಸಬೇಕು ಎಂದು ಮಹೇಶ್ ಗೆ ಸಚಿವರನ್ನಾಗಿ ಮಾಡಿದ್ರು. ವಿಶ್ರಾಂತಿಗಾಗಿ ಎರಡು ಬಾರಿ ವಿದೇಶ ಪ್ರವಾಸ ಮಾಡಿದ್ರಿ, ಸಾ. ರಾ ಮಹೇಶ್ ನನ್ನ ಕರ್ಕೊಂಡ್ ಹೋದ್ರಿ. ನಾನ್ ಮೇಲೆ ಒಂದ್ ದಿನಾನೂ ನೆನಪು ಬರಲಿಲ್ವಾ..? ಎಂದು ಹರಿಹಾಯ್ದ ಜಿ.ಟಿ ದೇವೇಗೌಡರು, ನನ್ನನ್ನ ಪಕ್ಷ ಬಿಟ್ಟು ಹೋಗಲಿ ಎನ್ನುವ ನಿಮ್ಮ ಭಾವನೆಗೆ ನಾನೇನು ಅಡ್ಡಿ ಬರಲ್ಲ, ಸಾ. ರಾ ಮಹೇಶ್ ಬೆಳವಣಿಗೆಗೂ ನಾನು ಅಡ್ಡಿ ಬರಲ್ಲ. ಸಾ. ರಾ ಮಹೇಶ್ ನಿಂದ ಪ್ರೊ. ರಂಗಪ್ಪ ಬೇಸರಗೊಂಡೆ ಸಿದ್ದರಾಮಯ್ಯರನ್ನ ಕರೆದುಕೊಂಡು ಬಂದಿದ್ದು. ಅವರಿಗೂ ಬೇಸರವಿದೆ ಎಂದು ಹೇಳಿದರು.
Key words: former minister-GT Deve Gowda-outrage-questions – former CM HD kumaraswamy