ರಾಜ್ಯಪಾಲರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಹಕ್ಕಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ,ಆಗಸ್ಟ್,1,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್ ನೀಡಿರುವ ಕುರಿತು ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಪಾಲರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಹಕ್ಕಿಲ್ಲ ಎಂದಿದ್ದಾರೆ.

ಇಂದು ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,   ರಾಜ್ಯಪಾಲರು ಸಂವಿಧಾನ ರಕ್ಷಕರು. ಗಂಭೀರ ಸ್ವರೂಪದ ಆರೋಪ ಬಂದಾಗ ತನಿಖೆಗೆ ಅನುಮತಿ ಕೊಡುತ್ತಾರೆ. ಕಾಂಗ್ರೆಸ್ ನಾಯಕರು ಯಾಕೆ ಭಯದಲ್ಲಿದ್ದಾರೆ. ರಾಜ್ಯಪಾಲರು ಏನಾದ್ರೂ ನಿಮ್ಮನ್ನ ನೇರವಾಗಿ ಜೈಲಿಗೆ ಹಾಕ್ತೀನಿ ಅಂದ್ರಾ? ನಮ್ಮನ್ನು ತನಿಖೆ ಮಾಡಬಾರದು ಅಂತಾ ಯಾಕೆ ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಹಗರಣದ ಬಗ್ಗೆ ಸಿಎಂ  ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.  ಈ ಹಿಂದೆ ರಾಜ್ಯಪಾಲರನ್ನ ಕಾಂಗ್ರೆಸ್ ನಾಯಕರು ಹೊಗಳಿದ್ದರು. ಈಗ ಯಾಕೆ ತೆಗಳುತ್ತಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ ಸರ್ಕಾರ ಅವರದ್ದೇ ಇದೆ.  ಹಗರಣ ನಡೆದಿದ್ದರೇ ಕಾಂಗ್ರೆಸ್ ನಾಯಕರು ನಮ್ಮನ್ನ ಬಿಡುತ್ತಿದ್ದರಾ. ಬಿವೈ ವಿಜಯೇಂದ್ರ ತನಿಖೆ ಮಾಡಲಿ ಎಂದು ಸವಲು ಹಾಕಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Congress leaders, Governor,  Union Minister, Prahlad Joshi