ವಿನೇಶ್ ಫೋಗಟ್ ಅನರ್ಹ: ಮರುಪರಿಶೀಲಿಸಲು ಭಾರತೀಯ ಕುಸ್ತಿ ಫೇಡರೇಷನ್ ಮನವಿ

ನವದೆಹಲಿ,ಆಗಸ್ಟ್,7,2024 (www.justkannada.in): ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 50 ಕೆಜಿ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು  ವಿನೇಶ್ ಪೋಗಟ್ ಅನರ್ಹಗೊಳಿಸಿರುವುದನ್ನು ಮರುಪರಿಶೀಲಿಸುವಂತೆ ವಿಶ್ವ ಕುಸ್ತಿ ಫೆಡರೇಷನ್ ಗೆ ಮನವಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತೀಯ ಕುಸ್ತಿ ಫೇಡರೇಷನ್  ಮನವಿ ಸಲ್ಲಿಸಿದ್ದು,  ವಿನೇಶ್ ಫೋಗಟ್ ಅವರ ಅನರ್ಹ ನಿರ್ಧಾರವನ್ನ ಮರುಪರಿಶೀಲಿಸುವಂತೆ ಮನವಿ ಮಾಡಿದೆ.

ಈ ಕುರಿತು ಮಾತನಾಡಿರುವ ಐಒಎ ಅಧ್ಯಕ್ಷೆ ಪಿ.ಟಿ ಉಷಾ, ವಿನೇಶ್ ಫೋಗಟ್ ಅನರ್ಹಗೊಂಡಿದ್ದು  ಆಘಾತವಾಗಿದೆ. ವಿನೇಶ್ ಫೋಗಟ್ ಅವರನ್ನ ಭೇಟಿಯಾಗಿ ಧೈರ್ಯ ತುಂಬಿದ್ದೇನೆ ಎಂದು ತಿಳಿಸಿದ್ದಾರೆ.

ವಿನೇಶ್​ ಪೋಗಟ್ ಅವರನ್ನು ಅನರ್ಹಗೊಳಿಸಿದ್ದಕ್ಕೆ 2008ರ ಬೀಜಿಂಗ್​ ಒಲಿಂಪಿಕ್ಸ್​ ಪದಕ ವಿಜೇತ ಬಾಕ್ಸರ್​ ವಿಜೇಂದರ್​ ಸಿಂಗ್​​ ಆಕ್ರೋಶ ಹೊರಹಾಕಿದ್ದಾರೆ. ವಿನೇಶ್​ ಅನರ್ಹಗೊಂಡಿದ್ದಕ್ಕೆ ಒಲಿಂಪಿಕ್ಸ್​ ಆಯೋಜಕರ ವಿರುದ್ಧ ​ ಕಿಡಿಕಾರಿರುವ ಅವರು,  ವಿನೇಶ್​ ಅವರು ಕುತಂತ್ರದ ಬಲಿಪಶು ಎಂದಿದ್ದಾರೆ. ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಲು ವಿನೇಶ್​ ಗೆ ಅವಕಾಶವನ್ನು ನೀಡಬಹುದಿತ್ತು ಎಂದಿದ್ದಾರೆ.

Key words: Vinesh Phogat, disqualified,  Wrestling Federation of India, appeals