ಮೈಸೂರು,ಆಗಸ್ಟ್,17,2024 (www.justkannada.in): ಮುಡಾ ಹಗರಣ ವಿರೋಧಿಸಿ ವಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ ತವರಿನಲ್ಲೇ ನಿಂತು ಖಡಕ್ ತಿರುಗೇಟು ನೀಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭದ್ರ ಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಕುಮಾರಸ್ವಾಮಿ ಜಂತಕಲ್ ಸೇರಿದಂತೆ 22 ಕಂಪನಿಗಳಿಗೆ ಗಣಿಗಾರಿಕೆಗೆ ಅನುಮತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ನಿಮಗೆ ನಾಚಿಕೆ ಆಗಲ್ವಾ..? ಜಂತಕಲ್ ಗಣಿ ಹಗರಣ ಮರೆತು ಬಿಟ್ರಾ..? ಎಂದು ಟಾಂಗ್ ಕೊಟ್ಟರು.
ಅಶೋಕ ಬಿಎಂ ಕಾವಲ್ ಕೇಸ್‌ನಲ್ಲಿ ಹೈಕೋರ್ಟ್‌ನಿಂದ ಸ್ಟೇ ಪಡೆದಿದ್ದಾನೆ. ಮಿಸ್ಟರ್ ಅಶೋಕ ನಾಚಿಕೆಯಾಗಲ್ವ. ನಾನು ತಪ್ಪುಮಾಡಿದ್ದೀನ, ಯಡಿಯೂರಪ್ಪ ಆಸ್ತಿ ಮಾಡಿದ್ದೀನಾ. ನಾನು ಯಾವತ್ತೂ ದ್ವೇಷ ಸೇಡಿನ ರಾಜಕಾರಣ ಮಾಡಿಲ್ಲ. ಬಹುಶಃ ನಾನು ಆ ರೀತಿ ಮಾಡಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ದ್ವೇಷದ ರಾಜಕಾರಣ ಮಾಡಿದ್ರೆ ಇವರೆಲ್ಲಾ ಜೈಲಿಗೆ ಹೋಗುತ್ತಿದ್ರು ಎಂದು ಗುಡುಗಿದರು.
ಆಸ್ತಿ, ಪ್ರಾಪರ್ಟಿ, ಬಿಲ್ಡಿಂಗ್ ಕಟ್ಟಬೇಕು ಅನ್ನೋ ವ್ಯಾಮೋಹ ಇಲ್ಲ. ನಾನು ರಾಜಕೀಯ ಆರಂಭ ಮಾಡಿದ್ದು ಜೀರೋ ಇಂದ. ಡೆಪಾಜಿಟ್ 250 ಹಣ ಕಟ್ಟಲು ನನ್ನ ಬಳಿ ಹಣ ಇರಲಿಲ್ಲ, ಆನಂದ ಕಟ್ಟಿದ. ನಮ್ಮಪ್ಪ, ನಮ್ಮ ಕುಟುಂಬ ಶ್ರೀಮಂತ ಕುಟುಂಬ ಅಲ್ಲ. ಹೊಟ್ಟೆ ಬಟ್ಟೆಗೆ ನೆರವಾಗಿದ್ದಂತ ಕುಟುಂಬ. ತಾಲೂಕು ಬೋರ್ಡ್ ಗೆ ನಿಲ್ಲಬೇಕು ಅಂತಾ ನಮ್ಮಪ್ಪನ ಬಳಿ ಹೇಳಿದ್ದೆ. ಆದ್ರೆ ನಮ್ಮಪ್ಪ ಯಾವುದೇ ಕಾರಣಕ್ಕೂ ಬೇಡ ಅಂತಾ ಹೇಳಿದ್ರು. ನಾನು ಪಂಚಾಯಿತಿ ಸೇರಿಸಿ ಅಪ್ಪನನ್ನ ಒಪ್ಪಿಸಿ ಚುನಾವಣೆಗೆ ನಿಂತೆ ಎಂದು ಚುನಾವಣೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರ ಬಗ್ಗೆ ಸ್ಮರಿಸಿದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ನಿಜ. ಆದರೆ ಹಣಕಾಸು ಸಚಿವರಿಗೂ ಹಗರಣಕ್ಕೂ ಸಂಬಂಧವಿಲ್ಲ. ರಾಜಕೀಯವಾಗಿ ತುಳಿಯಲು ನನ್ನ ವಿರುದ್ದ ಷಡ್ಯಂತ್ರ. ಆರ್.ಅಶೋಕ್ ಅಸಂಬದ್ದವಾಗಿ ಮಾತನಾಡಿದ. ಯಾವುದೇ ದಾಖಲೆ ಪುರಾವೆಗಳಿಲ್ಲದೆ ಮಾತನಾಡಿದ್ದಾರೆ. ನಾನು ಪ್ರಕರಣ ಬೆಳಕಿಗೆ ಬಂದ ಕೂಡಲೇ ಎಸ್‌ಐಟಿ ರಚನೆ ಮಾಡಿ ಆರೋಪಿಗಳನ್ನ ಬಂಧಿಸಿದ್ದೇವೆ. ಆ ನಿಗಮದಲ್ಲಿ 84.63 ಕೋಟಿ ಭ್ರಷ್ಟಾಚಾರ ಆಗಿದೆ. ಎಸ್ ಐಟಿ ಅಧಿಕಾರಿಗಳು 50ಕೋಟಿ ಹಣ ಜಪ್ತಿ ಮಾಡಿದ್ದಾರೆ ಎಂದರು.
ಈ ED ಅವ್ರು ಯಾವುದೇ ಸಾಕ್ಷ್ಯ ಇಲ್ಲದೆ ನನ್ನ ಸಿಕ್ಕಿಸಬೇಕು ಅಂತಾ ಮಾಡಿದ್ರು. ಹಣಕಾಸು ಇಲಾಖೆ ರೋಲ್ ಇಲ್ಲ ಅಂತಾ ಗೊತ್ತಾಗಿ ಸುಮ್ಮನಾಗಿದ್ದಾರೆ. ಅದು ವಿಫಲ ಆದ್ಮೇಲೆ ಮುಡಾ ವಿಚಾರ ಎತ್ಕೊಂಡಿದ್ದಾರೆ. ಮುಡಾ ಹಗರಣ ಅಲ್ವೇ ಅಲ್ಲ, ಅದನ್ನ ಹಗರಣ ಹಗರಣ ಅಂತಾ ಬೊಬ್ಬೆ ಹೊಡಿತ್ತಾವ್ರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಸ್ಟೇಟ್ ಮೆಂಟ್ ಇಲ್ಲ, ಪತ್ರ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡ್ಲಿ ಅಂತಾ ಅಶೋಕ, ಯಡಿಯೂರಪ್ಪ, ಕುಮಾರಸ್ವಾಮಿ, ಇವ್ರಿಗೆ ನನ್ನ ರಾಜೀನಾಮೆ ಕೇಳೋ ಯವ ನೈತಿಕತೆ ಇದೆ. ಯಡಿಯೂರಪ್ಪ 82 ವರ್ಷ ಪೋಕ್ಸೋ ಕೇಸ್ ನಲ್ಲಿ ಸಿಕ್ಕಾಕೊಂಡು ಚಾರ್ಜ್ ಶೀಟ್ ಆಗಿದೆ. 10 ನೇ ತಾರೀಕಿನ ಒಳಗೆ ರಾಜೀನಾಮೆ ಕೊಡ್ಬೇಕು ಅಂತಾರೇ. 18 ರಿಂದ 20 ಹಗರಣಗಳಲ್ಲಿ ಸ್ವತಃ ಯಡಿಯೂರಪ್ಪ ಸಿಕ್ಕಿ ಹಾಕೊಂಡಿದ್ದಾರೆ. ಯತ್ನಾಳ್ ವಿಡಿಯೋ ನೋಡಿದ್ರಿ. ವಿಜಯೇಂದ್ರ, ಯಡಿಯೂರಪ್ಪ ಸಾವಿರಾರು ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು
ನಾನೇನಾದ್ರೂ ತಪ್ಪು ಮಾಡಿದ್ದೀನಾ, ಯಡಿಯೂರಪ್ಪ ತರ ಡಿನೋಟಿಪೈ ಮಾಡಿದ್ದೀನಾ, ಚೆಕ್ ಮೂಲಕ ಹಣ ಪಡೆದಿದ್ದೀನಾ. ಕಲ್ಕತ್ತದಲ್ಲಿ ಶೆಲ್ ಕಂಪನಿ ಮೂಲಕ ದುಡ್ಡು ಹೊಡೆದಿರೋರು ಯಾರು ವಿಜಯೇಂದ್ರ. ಇವರೆಲ್ಲ ಜೈಲಿಗೆ ಹೋಗಬೇಕಾದವರು. ನಾನಗೆ ಆಸ್ತಿ ವ್ಯಾಮೋಹ ಇದ್ರೆ ಕೋಟಿಗಟ್ಟಲೆ ಆಸ್ತಿ ಮಾಡಬಹುದಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: HDK, Jantakal mine scandal, CM Siddaramaiah