Siddaramaiah will be the chief minister of the state for the next five years. MLC Dr. Yatindra Siddaramaiah makes big statement in Mysuru.
ಮೈಸೂರು, ಆ.10,2024: (www.justkannada.in news) ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಲ್ಲಿ ಬಿಗ್ ಸ್ಟೇಟ್ ಮೆಂಟ್.
ಇಲ್ಲಿನ ಟಿ.ಕೆ.ಲೇಔಟ್ ನಿವಾಸದ ಬಳಿ ಮಾಧ್ಯಮದ ಜತೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದಿಷ್ಟು..
ರಾಜ್ಯದ 135 ಮಂದಿ ಶಾಸಕರು ಒಟ್ಟಾಗಿ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣ ಇಲ್ಲದೆ ಸುಮ್ ಸುಮ್ನೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಐದು ವರ್ಷ ಸ್ಥಿರ ಸರ್ಕಾರದ ಜೊತೆ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ.
ಕೇಂದ್ರ ನಾಯಕರು ಕೂಡ ಸಿಎಂ ಜೊತೆ ಇದ್ದಾರೆ. ನಿನ್ನೆ ನಡೆದ ಜನಾಂದೋಲನ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ. ಯಾಕಂದ್ರೆ, ಸಿದ್ದರಾಮಯ್ಯ ಅವರು ತಪ್ಪೇ ಮಾಡಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಒಗ್ಗೂಡಿದ್ದಾರೆ.
ಮುಡಾ ಪ್ರಕರಣದಿಂದ ಸಿಎಂ ಶಕ್ತಿ ಕುಂದಿಲ್ಲ ನಾವು ಎಲ್ಲವನ್ನೂ ಎದುರಿಸಲು ಶಕ್ತರಾಗಿದ್ದೇವೆ. ಆರೋಪ ಮಾಡುವಾಗ ಪ್ರತ್ಯಾರೋಪ ಮಾಡಲೇಬೇಕು. ಬಿಜೆಪಿ- ಜೆಡಿಎಸ್ ನವರು ಗೊಬೆಲ್ಸ್ ಥಿಯರಿಯಂತೆ ನೂರು ಬಾರಿ ಒಂದೇ ಸುಳ್ಳನ್ನು ಹೇಳಿ ಅದನ್ನು ನಿಜವೆಂದು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಸರಿಯಾದ ತಿರುಗೇಟು ನೀಡುವ ಸಲುವಾಗಿಯೇ ನಮ್ಮ ವಿರುದ್ಧದ ಷಡ್ಯಂತ್ರಕ್ಕೆ ಜನಾಂದೋಲನದ ಮೂಲಕ ಸೂಕ್ತ ಉತ್ತರ ಕೊಟ್ಟಿದ್ದೇವೆ.
key words: MYSORE NEWS, MLC, Dr Yatindra Siddaramaiah’s, “big statement”, on CM’s chair
SUMMARY:
Siddaramaiah will be the chief minister of the state for the next five years. MLC Dr. Yatindra Siddaramaiah makes big statement in Mysuru.