ಮುಡಾ ಅಕ್ರಮ ಸಿಬಿಐ ತನಿಖೆಗೆ ಮತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಆಗಸ್ಟ್,13,2024 (www.justkannada.in):  ಮೂಡಾ ಹಗರಣವನ್ನ ಸಿಬಿಐ ತನಿಖೆಗೆ ವಹಿಸಬೇಕು.  ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ ವಿಜಯೇಂದ್ರ, ಬಿಜೆಪಿ ಅವಧಿ ಹಗರಣ ತನಿಖೆ ಮಾಡಸಿತ್ತೇನೆ ಎಂದು 2 ತಿಂಗಳಿನಿಂದ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ.  ಕೂಡಲೇ ತನಿಖೆ ಮಾಡಿ ಎಂದು ಸಿಎಂ ಮತ್ತು ಡಿಸಿಎಂಗೆ ಹೇಳುವೆ ಎಂದರು.

ಕರ್ನಾಟಕದ ರೈತರು ಬರ ಮತ್ತು ಪ್ರವಾಹ ಎರಡರಲ್ಲೂ ಸಂತ್ರಸ್ತರಾಗುತ್ತಾರೆ.  ಜಲಸಂಪನ್ಮೂಲ ಸಚಿವರು ಯಾವುದೇ ಸಭೆ ಕರೆದಂತೆ ಕಾಣುತ್ತಿಲ್ಲ  ಬೆಂಗಳೂರಿನಲ್ಲೇ ಬ್ಯೂಸಿಯಾದಂತೆ ಕಾಣುತ್ತಿದೆ. ಬೆಂಗಳೂರು ಅಭಿವೃದ್ದಿ ಎತ್ತರದ ಟವರ್ ಬಗ್ಗೆಯೇ ಮಾತನಾಡುತ್ತಿರುತ್ತಾರೆ ಎಂದು ಕಿಡಿಕಾರಿದರು.

ಇನ್ನು ಬಿಜೆಪಿಯಲ್ಲಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ  ಪಕ್ಷದ ಅಧ್ಯಕ್ಷ ಆದಾಗಿನಿಂದಲೂ ಅದೇ ಕೆಲಸ ಮಾಡುತ್ತಿದ್ದೇನೆ. ಕೆಲವರು ಪ್ರತ್ಯೇಕ ಪಾದಯಾತ್ರೆ ಮಾಡಲು ಅಪೇಕ್ಷೆ ಪಡುತ್ತಾರೆ. ಪಕ್ಷಕ್ಕೆ ಶಕ್ತಿ ಬರುತ್ತೆ ಎಂದಾದರೇ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತೆ. ಅದಕ್ಕೆ ನನ್ನ ಯಾವುದೇ ರೀತಿ ತಕರಾರಿ‍ಲ್ಲ. ಎಲ್ಲಿ ಏನೇ ಮಾಡಿದರೂ ಕೂಡ ಅದು ಪಕ್ಷಕ್ಕೆ ಪೂರಕವಾಗಿರಬೇಕು ಸಂಘಟನೆಗೆ ಲಾಭ ಆಗಬೇಕು ಎಂಬ ಸದುದ್ದೇಶ ಇದ್ದರೇ ಸಾಕು ಎಂದು ವಿಜಯೇಂದ್ರ ತಿಳಿಸಿದರು.

Key words: BY Vijayendra, CBI, Muda, case,  CM Siddaramaiah