ಕೊಪ್ಪಳ, ಆಗಸ್ಟ್,13,2024 (www.justkannada.in): ತುಂಗಭದ್ರಾ ಜಲಾಶಯದ 19ನೇ ಗೇಟ್ ನ ಚೈನ್ ಕಟ್ ಆಗಿದೆ. ಆದರೆ ಇದನ್ನ ಸರ್ಕಾರದ ಹೊಣಗೇಡಿತನ ಅಂದ್ರೆ ಏನರ್ಥ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಡ್ಯಾಮ್ ಗೆ ಬೋರ್ಡ್ ಇದೆ. ಚೇರ್ಮನ್ ರನ್ನು ಯಾರು ನೇಮಕ ಮಾಡುತ್ತಾರೆ? ಟಿಬಿ ಡ್ಯಾಮ್ ಬೋರ್ಡ್ ಅಧ್ಯಕ್ಷರನ್ನ ಕೇಂದ್ರ ಸರ್ಕಾರ ನೇಮಿಸುತ್ತೆ. ಹೀಗಾಗಿ ಬಿಜೆಪಿಯವರು ರಾಜಕೀಯವಾಗಿ ಟೀಕಿಸುತ್ತಾರೆ. ಈ ಬಗ್ಗೆ ನಾನು ರಾಜಕೀಯ ಮಾಡಲ್ಲ ಎಂದರು.
ಯಾರು ತಪ್ಪು ಮಾಡಿದ್ದಾರೆಂದು ಹೇಳೋಕೆ ಹೋಗಲ್ಲ ಟಿಬಿ ಡ್ಯಾಮ್ ಹಳೆಯ ಜಲಾಶಯ. ನಾನು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಗೂಬೆ ಕೂರಿಸುವುದು ಬಿಜೆಪಿಗೆ ಒಂದು ಕೆಲಸವಾಗಿದೆ. ಜಲಾಶಯದಲ್ಲಿ ನೀರು ತುಂಬಿತ್ತು ಈಗ ಹೊರ ಬಿಡಬೇಕಿದೆ. ರೈತರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Tungabadra dam, gate, CM Siddaramaiah, BJP