ರಾಜ್ಯದಲ್ಲಿ ಹೂಡಿಕೆಗೆ ಬೆಸ್ಟೆಕ್ ಸಮೂಹದ ಆಸಕ್ತಿ- ಸಚಿವ ಎಂ‌.ಬಿ ಪಾಟೀಲ್

ಬೆಂಗಳೂರು,ಆಗಸ್ಟ್,20,2024 (www.justkannada.in):  ರಾಜ್ಯದಲ್ಲಿ 200 ಕೋಟಿ ರೂ. ಬಂಡವಾಳ ಹೂಡಿಕೆಗೆ ತೈವಾನ್ ನ ಬೆಸ್ಟೆಕ್ ಪವರ್‌ ಎಲೆಕ್ಟ್ರಾನಿಕ್ಸ್ ಕಂಪನಿ ಆಸಕ್ತಿ ತಾಳಿದ್ದು, ಬೆಂಗಳೂರಿನ ಸುತ್ತಮುತ್ತ  ಕಾರ್ಖಾನೆ ಸ್ಥಾಪಿಸಲು ಆಸಕ್ತಿ ತೋರಿದೆ.  ಅದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್  ಹೇಳಿದ್ದಾರೆ.

ಮಂಗಳವಾರ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ತಮ್ಮನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದರು.

ತೈವಾನ್ ಮೂಲದ ಕಂಪನಿಯ ಈ ಯೋಜನೆಯಿಂದ 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಮೂಲಸೌಕರ್ಯ ಅಭಿವೃದ್ಧಿ ಬಳಿಕ ಮೂರು ವರ್ಷಗಳಲ್ಲಿ ಕಂಪನಿಯು ಯೋಜನೆಗೆ ಹಂತಹಂತವಾಗಿ ಬಂಡವಾಳ ಹೂಡಲಿದೆ ಎಂದು ಅವರು ವಿವರಿಸಿದ್ದಾರೆ.

ಬೆಸ್ಟೆಕ್ ಕಂಪನಿಯು ಅಡಾಪ್ಟರ್, ಸಿ-ಪಿನ್, ಇ.ವಿ. ಮತ್ತು ಲ್ಯಾಪ್‌ಟಾಪ್ ಚಾರ್ಜರ್, ಕೇಬಲ್ ಇತ್ಯಾದಿಗಳನ್ನು ಉತ್ಕೃಷ್ಟ ಗುಣಮಟ್ಟದೊಂದಿಗೆ ತಯಾರಿಸಲಿದೆ. ಈ ಮೂಲಕ ಕಂಪನಿಯು ವಾರ್ಷಿಕವಾಗಿ 2,500 ಕೋಟಿ ರೂಪಾಯಿ ವಹಿವಾಟು ನಡೆಸಲಿದೆ ಎಂದು ಅವರು ವಿವರಿಸಿದ್ದಾರೆ.

Key words: Interest, Bestek group, invest, state, Minister, M. B Patil