ದಾಖಲೆ ತಿದ್ದುವ ನೀಚ ಕೆಲಸಕ್ಕೆ ನಾವು ಯಾರೂ ಇಳಿದಿಲ್ಲ- ಸಚಿವ ಭೈರತಿ ಸುರೇಶ್

ಬೆಂಗಳೂರು,ಆಗಸ್ಟ್,21,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿ ಬಿಡುಗಡೆಗೊಳಿಸಿದ ದಾಖಲೆ ತಿದ್ದಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪ ಕುರಿತು  ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಭೈರತಿ ಸುರೇಶ್,  ದಾಖಲೆ ತಿದ್ದುವಂತಹ ನೀಚ ಕೆಲಸಕ್ಕೆ ನಾವು ಯಾರೂ ಇಳಿದಿಲ್ಲ. ದಾಖಲೆ ತಿದ್ದುವಂತಹ ಪರಿಸ್ಥಿತಿ ಬಂದಿಲ್ಲ.  ಮುಡಾ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಬೇರೆ ಏನೋ ಆಗಿದೆ ಅನ್ನೋದು ಅಲ್ಲ, ಏನೂ ಮಿಸ್ಟೇಕ್ ಆಗಲ್ಲವಾ ಎಂದರು.

ಜಮೀನಿಗೆ ಪರಿಹಾರ ನೀಡಿಲ್ಲ, ಅಷ್ಟೇ ವಿಸ್ತೀರ್ಣದ ಜಮೀನು ಅಂತಾ ಹೇಳಿದ್ದಾರೆ. ಅಲ್ಲಿ ವರ್ಷ ಮಿಸ್ಟೇಕ್ ಆಗಿರಬಹುದು. ಇಲ್ಲವೇ ಸಮಾನಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ. ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ವಿಜಯನಗರ ಲೇಔಟ್ ಅಂತಾ ಎಲ್ಲಿ ಬರೆದಿದ್ದಾರೆ. ಸಮಾನಂತರ ಜಾಗ ಅಂತಾ ಬರೆದಿದ್ದಾರೆ, ಎಲ್ಲವನ್ನೂ ನೋಡಿ ಹೇಳಿಕೆ ನೀಡಬೇಕು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.

Key words: Muda case, records, Minister, Bhairati Suresh