ಬೇರೆ ಜೈಲಿಗೆ ನಟ ದರ್ಶನ್ ಶಿಫ್ಟ್ ಬಗ್ಗೆ ಎರಡ್ಮೂರು ದಿನಗಳಲ್ಲಿ ನಿರ್ಧಾರ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಆಗಸ್ಟ್,27,2024 (www.justkannada.in):  ಬೇರೆ ಜೈಲಿಗೆ ಆರೋಪಿ ನಟ ದರ್ಶನ್ ರನ್ನು ಸ್ಥಳಾಂತರಿಸುವ ಬಗ್ಗೆ ಎರಡು ಮೂರು ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬೇರೆ ಜೈಲಿಗೆ ಸ್ಥಳಾಂತರಿಸುವ ತೀರ್ಮಾನ ನಾವು ಮಾಡೋಕಾಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಬೇಕು. ದರ್ಶನ್ ವಿಚಾರಣಾಧೀನಾ ಕೈದಿ ಆಗಿರುವ ಹಿನ್ನೆಲೆ ಕೆಲ ನಿಯಮಗಳಿವೆ ಇನ್ನೂ ಎರಡು ಮೂರು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ದರ್ಶನ್ ಗೆ ಕೆಲ ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ. ಇದು ಸಿಸಿಟಿವಿಯಿಂದ ತಿಳಿದು ಬಂದಿದೆ. ಈಗಾಗಲೇ 9 ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿದೆ.  ಸಿಸಿಟಿಯಲ್ಲಿ ಸೆರೆಯಾಗಿದ್ದಕ್ಕೆ ಕ್ರಮ ಕೈಗೊಳ್ಳುಲು ಸಾಧ್ಯವಾಯಿತು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ  ಸಂಪೂರ್ಣ ತನಿಖಾ ವರದಿ ಬಂದ ನಂತರ ಉಳಿದವರ ಬಗ್ಗೆ ಕ್ರಮ ಕೈಗೊಳ್ಳಳಾಗುತ್ತದೆ ಎಂದರು.

ಇನ್ನು ಬೇರೆ ಜೈಲಿನಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ.  ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುವುದು.  ಬೇರೆ ಬೇರೆ ಜೈಲುಗಳ ಅಕ್ರಮದ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ. ಬೇರೆ ಜೈಲುಗಳಬಗ್ಗೆ ಹಿಂಡಿಲಗಾ ಜೈಲು  ಸೇರಿ ಎಲ್ಲಾ ಕಾರಗೃಹಗಳ ವ್ಯವಸ್ಥೆ ಬಗ್ಗೆ ವರದಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: actor Darshan, shift, another, jail, Minister, Parameshwar