ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿಯೇ ಕಾನೂನು ಬಾಹಿರ: ಹೈಕೋರ್ಟ್ ನಲ್ಲಿ ಸಿಎಂ ಪರ ವಕೀಲರ ವಾದ

ಬೆಂಗಳೂರು,ಆಗಸ್ಟ್,31,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ  ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಆರಂಭವಾಗಿದೆ.

ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ರವಿವರ್ಮಕುಮಾರ್,  ಬಿಎನ್ ಎಸ್ ಕಾಯ್ದೆ ಅಡಿ ತನಿಖೆಗೆ ಕೇಳಲಾಗಿದೆ.  ಬಿಎನ್ ಎಸ್ ಸೆಕ್ಷನ್ ಅಡಿ ಹೇಗೆ ಅನುಮತಿ ನೀಡಲು ಸಾಧ್ಯ..? ಎಂದರು.

ಆರೋಪಿತ ಘಟನೆ ನಡೆದಾಗ  ಬಿಎನ್ ಎಸ್  ಕಾಯ್ದೆ ಜಾರಿ ಇರಲಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿಯೇ ಕಾನೂನು ಬಾಹಿರ. ಇದು ಪೂರ್ವಾಗ್ರಹ ಆದೇಶ ಎಂದು ಗೊತ್ತಾಗುತ್ತದೆ. ಐಪಿಸಿ ಅಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ.

Key words: Governor,  permission, prosecution, High Court