ರಾಷ್ಟ್ರೀಯ ಈಜುಸ್ಪರ್ಧೆಯಲ್ಲಿ ಮೈಸೂರಿನ ಬಾಲಕಿಗೆ 3 ಪದಕ

ಮೈಸೂರು,ಸೆಪ್ಟಂಬರ್,9,2024 (www.justkannada.in): ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೈಸೂರಿನ ಜಿಎಸ್ಎಯ ಈಜುಪಟು ಹಾರಿಕಾ‌ 1ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದು, ಸ್ಕೂಲ್ ಗೇಮ್ಸ್ ಆಫ್‌ ಇಂಡಿಯಾಗೆ ಆಯ್ಕೆಯಾಗಿದ್ದಾಳೆ.

ನವದೆಹಲಿಯಲ್ಲಿ ನಡೆದ ಕೇಂದ್ರೀಯ ವಿದ್ಯಾಲಯ ಸಂಘಟನೆಯ 53 ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಮೈಸೂರಿನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಶಾಲೆಯ ಹಾರಿಕಾ 3 ಪದಕ ಪಡೆದಿದ್ದಾರೆ.

ಈ ಬಾಲಕಿಯು ಮೈಸೂರಿನ ಜೆ.ಪಿ.ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆಯುತ್ತಿದ್ದು, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಇವರು 200ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚು ಹಾಗೂ 4 X100 ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಪಡೆದು, ಉತ್ತಮ ಪ್ರದರ್ಶನ ನೀಡಿ, ಸ್ಕೂಲ್ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ( ಎಸ್ ಜಿಎಫ್ಐ)ಗೆ‌ ಆಯ್ಕೆಯಾಗಿದ್ದಾರೆ.

ಬಾಲಕಿಯ ಈ ಸಾಧನೆ ಸಂತಸ ತಂದಿದ್ದು, ಮುಂದಿನ ಸ್ಪರ್ಧೆಯಲ್ಲಿ ಜಯಶಾಲಿಯಾಗಲಿ ಎಂದು ಜಿಎಸ್ಎ ಯ ಮುಖ್ಯ ತರಬೇತುದಾರ ಪವನ್ ಕುಮಾರ್ ಹಾಗೂ ಜಿಎಸ್ಎ ತಂಡ ಹಾರೈಸಿದೆ.

ರಾಷ್ಟ್ರೀಯ ಶಾಟ್೯ ಕೋಸ್೯ ಸ್ಪರ್ಧೆ: ಸಾನ್ವಿಗೆ 3 ಬೆಳ್ಳಿ ಪದಕ

ದಕ್ಷಿಣ ವಲಯ ರಾಷ್ಟ್ರೀಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ ಶಿಪ್ ನಲ್ಲಿ ಸಾನ್ವಿ .ಆರ್ 3 ಬೆಳ್ಳಿ ಪದಕ ಹಾಗೂ ಕೃತಿಕ್ ವೇದೇಶ್  1 ಬೆಳ್ಳಿ ಪದಕ ಪಡೆದು ಮೈಸೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮೈಸೂರಿನ ಸಾನ್ವಿ ಹಾಗೂ ಕೃತಿಕ್ ವೇದೇಶ್ ಒಟ್ಟು 4 ಬೆಳ್ಳಿ ಪದಕ ಗಳಿಸಿದ್ದಾರೆ.

ಇವರಿಬ್ಬರೂ ಜೆ.ಪಿ. ನಗರದ ಗ್ಲೋಬಲ್ ಸ್ಪೋಟ್ಸ್೯ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆಯುತ್ತಿದ್ದು, ಇವರ ಗೆಲುವನ್ನು ಜಿಎಸ್ಎ ತಂಡ ಶ್ಲಾಘಿಸಿದೆ.

Key words: national , swimming competition, 3 medals, Mysore, girl