ಕೋವಿಡ್ ಹಗರಣ: ಯಾರಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ- ಸಂಸದ ಡಾ.ಕೆ.ಸುಧಾಕರ್

ಮೈಸೂರು,ಸೆಪ್ಟಂಬರ್,20,2024 (www.justkannada.in):  ಕೋವಿಡ್ ಸಮಯದಲ್ಲಿ ಹಗರಣ ನಡೆದಿರುವ ವಿಚಾರ ಸಂಬಂಧ ಯಾರಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ಸುಧಾಕರ್, ಸರ್ಕಾರ ಬಂದು 16 ತಿಂಗಳಾಗಿದ್ದು 16 ತಿಂಗಳ ಹಿಂದೆ ಬಿಜೆಪಿ ಸರ್ಕಾರ ಇತ್ತು. ಈಗ ಮಧ್ಯಂತರ ವರದಿ ತರಿಸಿಕೊಂಡಿದ್ದಾರೆ. ಅಂತಿಮ ವರದಿ ಯಾವಾಗ ಬರುತ್ತೆ ಗೊತ್ತಿಲ್ಲ. ಸರ್ಕಾರಗಳು ಸೈಕಲ್ ಇದ್ದ ಹಾಗೆ. ಚಕ್ರ ತಿರುಗುವ ರೀತಿ ತಿರುಗುತ್ತೆ. ಹಿಂದೆ ನಮ್ಮ ಸರ್ಕಾರ ಇತ್ತು. ಈಗ ಕಾಂಗ್ರೆಸ್ ಸರ್ಕಾರ ಇದೆ. ನಾವು ಒಂದೆ ಒಂದು ಪ್ರಕರಣದಲ್ಲಿ ಈ ರೀತಿ ಮಾಡಿಲ್ಲ. ಒಂದೆ ಒಂದು ದ್ವೇಷದ ರಾಜಕಾರಣ ಮಾಡಿಲ್ಲ. ತನಿಖಾ ಅಸ್ತ್ರ ಇಟ್ಟುಕೊಂಡು ಬೆದರಿಸುವ ಕೆಲಸ ‌ಮಾಡಲಿಲ್ಲ. ನಾವು ಹೆದರಿಕೊಳ್ಳಲು ಯಾವುದೇ ವಿಷಯ ಬಚ್ಚಿಟ್ಟಿಲ್ಲ. ಖುರ್ಚಿ ಇರುವವರೆಗೆ ಮಾಡುತ್ತಾರೆ. ಇನ್ನೊಬ್ಬರು ಬರುತ್ತಾರೆ ಅವರಿಗೆ ದ್ವೇಷದ ರಾಜಕಾರಣ ಮಾಡುವುದು ಗೊತ್ತಿಲ್ಲವಾ. ದ್ವೇಷದ ರಾಜಕಾರಣ ಕಲಿಸಿಕೊಡುತ್ತಿದ್ದಾರೆ. ನಾವು ಕಲಿತುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ  ಟಾಂಗ್ ಕೊಟ್ಟರು.

ಬಿಜೆಪಿ ತನಿಖೆ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸುಧಾಕರ್,  ಐಟಿ ಬಿಜೆಪಿ ಸರ್ಕಾರ ಬಂದ ಮೇಲೆ ಬಂತಾ. ಹಿಂದೆ ಎಷ್ಟು ಜನರನ್ನ ಜೈಲಿಗೆ ಕಳುಹಿಸಿದ್ದಾರೆ‌. ಜನಾರ್ದನ ರೆಡ್ಡಿ ಅವರನ್ನ ಜೈಲಿಗೆ ಕಳಹಿಸಿದ್ದವರು ಯಾರು. ಅವರಿದ್ದಾಗ ಸಿಬಿಐ, ಐಟಿ ಪವಿತ್ರ ಸಂಸ್ಥೆ. ಈಗ ವರ್ಸ್ಟ್ ಆಗಿದಿಯಾ? ಯಾವಾಗ ಕಾಂಗ್ರೆಸ್ ಆಡಳಿತ ಕಳೆದುಕೊಂಡಿತು. ಈಗ ತನಿಖೆ ಸಂಸ್ಥೆ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Covid scam, MP, Dr. K. Sudhakar, mysore