ಕೂಂಬಿಂಗ್ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ಹುಲಿ ಹಠಾತ್ ದಾಳಿ

ಮೈಸೂರು.ಸೆಪ್ಟಂಬರ್,23,2024 (www.justkannada.in):  ಕೂಂಬಿಂಗ್ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ಹಠಾತ್ ಹುಲಿ ದಾಳಿ ನಡೆಸಿದ್ದು ಈ ವೇಳೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಹುಲಿ ಓಡಿಸಿದ ಘಟನೆ  ಕೋಣನಹೊಸಹಳ್ಳಿಯಲ್ಲಿ ಬಳಿ ನಡೆದಿದೆ.

ನಾಗರಹೊಳೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಕೂಂಬಿಂಗ್ ನಡೆಸುತ್ತಿದ್ದರು. ಈ ವೇಳೆ ಹುಲಿ ದಾಳಿ ನಡೆಸಿದ್ದು, ದಿನಗೂಲಿ ನೌಕರ ದಿವಾಕರಗೆ ಗಾಯವಾಗಿದೆ. ದಿವಾಕರ್‌ಗೆ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಕೊಳವಿಗೆ ಬಳಿ ಹಸುಗಳ ಮೇಲೆ ಹುಲಿ ದಾಳಿ ನಡೆಸಿತ್ತು. ಹುಲಿ ಪತ್ತೆಗೆ ಡಿಆರ್‌ಎಫ್‌ಓಗಳಾದ ನವೀನ್, ನವೀನ್ ಗೌಡರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಜೋಳದ ಹೊಲದಲ್ಲಿದ್ದ ಹುಲಿ ದಿವಾಕರ್ ಮೇಲೆ ದಾಳಿ ನಡೆಸಿದೆ. ಈ ಸಮಯದಲ್ಲಿ ಜೊತೆಗಿದ್ದವರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಅಲ್ಲಿಂದ ಹುಲಿ ಪರಾರಿಯಾಗಿ ಕಾಡು ಸೇರಿದೆ. ಡ್ರೋಣ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.

Key words: tiger, suddenly, attacked, combing, forest, staff