ಮುನಿರತ್ನ ವಿರುದ್ದ ದಿನಕ್ಕೊಂದು ಪ್ರಕರಣ: ಹೀಗಾಗಿ ಎಸ್ ಐಟಿ ರಚನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆಪ್ಟೆಂಬರ್‌ 23,2024 (www.justkannada.in): ಶಾಸಕ ಮುನಿರತ್ನ ವಿರುದ್ಧ ದಿನಕ್ಕೊಂದು ಪ್ರಕರಣ ಬರುತ್ತಿದೆ. ಹೀಗಾಗಿ ತನಿಖೆಗಾಗಿ ಎಸ್ ಐಟಿ ರಚನೆ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್,  ಮುನಿರತ್ನ ವಿರುದ್ಧ ಜಾತಿನಿಂದನೆ, ಅತ್ಯಾಚಾರ ಆರೋಪ ಹೀಗೆ ದಿನಕ್ಕೊಂದು ಪ್ರಕರಣಗಳು ಹೊರಬರುತ್ತಿವೆ. ಮೇಲ್ನೋಟಕ್ಕೆ ಒಂದು ಪ್ರಕರಣ ಎಂದು ಭಾವಿಸಲಾಗಿತ್ತು. ಈಗ ಬೇರೆಬೇರೆ ಪ್ರಕರಣಗಳು  ಸೇರ್ಪಡೆಯಾಗುತ್ತಿವೆ. ಹೀಗಾಗಿ ಮುನಿರತ್ನ ಅವರ ಪ್ರಕರಣಗಳ ಕುರಿತು ಕೂಲಂಕುಷವಾಗಿ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌ ಎಂದು ಪರಮೇಶ್ವರ್ ತಿಳಿಸಿದರು.

 

Key words: MLA, Muniratna, case,SIT, Home Minister, Parameshwar