ಒಬ್ಬ ಶ್ರೇಷ್ಠ ನಾಯಕನ ಪದಚ್ಯುತಿಗೆ ಬಿಜೆಪಿ ಹುನ್ನಾರ: ಇಂದು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಕರಾಳ ದಿನ- ಎಂ.ಲಕ್ಷ್ಮಣ್

ಮೈಸೂರು,ಸೆಪ್ಟಂಬರ್,24,2024 (www.justkannada.in): ಒಬ್ಬ ಶ್ರೇಷ್ಠ ನಾಯಕನ ಪದಚ್ಯುತಿ ಮಾಡುವ ಹುನ್ನಾರ ಬಿಜೆಪಿದ್ದು. ಸಿಎಂ ಸಿದ್ದರಾಮಯ್ಯಕೆಳಗಿಳಿಸಲಿಕ್ಕೆ ನಿಮ್ಮ ಹಣೆಯಲ್ಲೇ ಬರೆದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗುಡುಗಿದರು.

ಮುಡಾ ಹಗರಣ ಸಂಬಧ ಸಿಎಂ  ಸಿದ್ದರಾಮಯ್ಯ ವಿರುದ್ಧ ತೀರ್ಪು ಹೊರ ಬಿದ್ದ ಹಿನ್ನೆಲೆ ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಇವತ್ತು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಒಂದು ಕರಾಳ ದಿನ.  ಏನೂ ಇಲ್ಲದೆ ಇರುವ ಸಂಗತಿಯನ್ನ ಹೈಕೋರ್ಟ್ ವರೆಗೆ ತೆಗೆದುಕೊಡು  ಹೋಗಿ ಹೈಕೋರ್ಟ್ ತೀರ್ಪು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಕಾನೂನಿನ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ. ನಮ್ಮ ರಾಜ್ಯದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಹಾರಾಜು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯವರ ಚಾಳಿ ಇದು, ಕಳೆದ 10 ವರ್ಷಗಳಲ್ಲಿ 410 ಕ್ಕೂ ಹೆಚ್ಚು ಜನರನ್ನ ಆಪರೇಷನ್ ಕಮಲ ಮಾಡಿದ್ದಾರೆ. ಒಬ್ಬ ಶ್ರೇಷ್ಠ ನಾಯಕನ ಪದಚ್ಯುತಿ ಮಾಡುವ ಹುನ್ನಾರ ಬಿಜೆಪಿಯವರಾದ್ದಾಗಿದೆ ಎಂದು ಟೀಕಿಸಿದರು.

ಈ ರಾಜ್ಯಪಾಲರನ್ನ ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು. ಇಲ್ಲ ಅಂದ್ರೆ ಮುಂದೆ ಆಗುವಂತಹ ಘಟನೆಗೆ ಬಿಜೆಪಿ ಅವರೇ ಕಾರಣ ಆಗುತ್ತಾರೆ. ರಾಜ್ಯಪಾಲರು ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಕೂತು ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬೇಡಿ. ಸ್ವಲ್ಪ ಸದ್ಯಕ್ಕೆ ಹಿನ್ನೆಡೆಯಾಗಿದೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಸತ್ಯ ಮೇವ ಜಯತೆ ಎಂಬುವುದರ ಮೇಲೆ ನಂಬಿಕೆ ಇಟ್ಟಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರೇ ಮುಂದೆಯೂ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.

ತೀರ್ಪು ಹೊರ ಬೀಳುವುದಕ್ಕೂ ಮುಂಚಿತವಾಗಿ  ವಿಜಯೇಂದ್ರ ಮಾಧ್ಯಮಗಳಲ್ಲಿ ಹೇಳಿಕೆ ಕೊಡುತ್ತಾರೆ ಅಂದರೆ, ತೀರ್ಪಿನ ಬಗ್ಗೆ ಮುಂಚಿತವಾಗಿ ತಿಳಿದಿತ್ತಾ.? ಇದೆಲ್ಲ ಬಿಜೆಪಿಯವರ ಷಡ್ಯಂತ್ರ ಸಿಎಂ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಲಿಕ್ಕೆ ನಿಮ್ಮ‌ ಹಣೆಯಲ್ಲಿ ಬರೆದಿಲ್ಲ. ವ್ಯವಸ್ಥೆಯನ್ನ ದುರುಪಯೋಗ ಪಡಿಸಿಕೊಂಡು ರಾಜ್ಯ ಸರ್ಕಾರದವನ್ನ ದುರ್ಬಲಗೊಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇದಕ್ಕೆಲ್ಲ ಜಗ್ಗಲ್ಲ ನಾವು ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡುತ್ತೇವೆ. ಆಧಾರ ರಹಿತ ಪ್ರಕರಣಕ್ಕೆ ಪ್ರಾಸಿಕ್ಯೂಸನ್ ಕೊಟ್ಟಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಪಾಲರು  ಪತ್ರವನ್ನು ಬರೆದು ಎದುರಿಸುವ ಕೆಲಸ ಮಾಡುತ್ತಿದ್ದಾರೆ. ನೀವೇ ಲೀಕ್ ಮಾಡಿ ರಾಜ್ಯ ಸರ್ಕಾರದ ಮೇಲೆ ಹೊರೆಸುತ್ತಿದ್ದೀರಾ. ಕಳ್ಳ ಕಳ್ಳತನ ಮಾಡಿ ಕಳ್ಳ ಕಳ್ಳ ಅಂತ ಇವರೇ ಹೇಳಿಕೊಳ್ಳುವಂತಾಗಿದೆ. ಯಾವ ಹಂತಕ್ಕೆ ಹೋದರೂ ನಾವು ಎದುರಿಸುವ ಭರವಸೆ ಇದೆ. ಸಿಎಂ ಪರವಾಗಿ ನಾವು ಇದ್ದೇವೆ. ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

Key words: CM Siddaramaiah, high court, Application, dismisse, M. Laxman