MYSORE TRAFFIC: ರಸ್ತೆ ಸುರಕ್ಷತೆ ಹಾಳುಮಾಡುತ್ತಿರುವ ಅವೈಜ್ಞಾನಿಕ ಜಾಹಿರಾತು ಫಲಕ.

MYSORE TRAFFIC: UNSCIENTIFIC BILLBOARD THAT IS SPOILING ROAD SAFETY. The demand for hoardings has increased in the wake of Dasara festivities, which has resulted in an increase in the menace of unscientific hoardings. This is causing inconvenience to motorists.

 

The demand for hoardings has increased in the wake of Dasara festivities, which has resulted in an increase in the menace of unscientific hoardings. This is causing inconvenience to motorists.

ಮೈಸೂರು, ಸೆ.27,2024: (www.justkannada.in news): ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಾಹಿರಾತು ಫಲಕಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಅವೈಜ್ಞಾನಿಕ ಜಾಹಿರಾತು ಫಲಕ ಹಾವಳಿ ಹೆಚ್ಚಿದೆ. ಇದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿದೆ.

ನಗರ ಪ್ರದೇಶಗಳಲ್ಲಿ, ಸಾರಿಗೆ ಮತ್ತು ಪ್ರಯಾಣ ಪ್ರಮುಖ ಆವಶ್ಯಕತೆಯಾಗಿದ್ದು, ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಅವೈಜ್ಞಾನಿಕವಾಗಿ ಸ್ಥಾಪಿಸಲಾದ ಜಾಹಿರಾತು ಫಲಕಗಳು ರಸ್ತೆ ಸುರಕ್ಷತೆಯನ್ನು ಹಾಳುಮಾಡುತ್ತಿವೆ. ಈ ಜಾಹಿರಾತುಗಳು ವಾಹನ ಸವಾರರ ಗಮನವನ್ನೆಳೆಯುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುವ ಅಪಾಯ ಎದುರಾಗಿದೆ.

ಮೈಸೂರಿನ ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್‌ ಬಂಕ್‌ ಗಳಿ ನಿರ್ಮಿಸಿರುವ ಬೃಹತ್ ಜಾಹಿರಾತು ಫಲಕ‌, ವಾಹನ ಸವಾರರ ದಿಕ್ಕು ತಪ್ಪಿಸುವಂತಿದೆ. ನಗರಕ್ಕೆ ಪ್ರವೇಶಿಸುವ ಪ್ರವಾಸಿಗರನ್ನು  ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿತ್ತು. ಇದೀಗ ಆ ಫಲಕಗಳಿಗೆ ಹೊಸದಾಗಿ ಜಾಹಿರಾತು ಫಲಕಗಳನ್ನು ಸೇರ್ಪಡೆಗೊಳಿಸಿ ಬೃಹತ್‌ ಜಾಹಿರಾತು ಫಲಕವನ್ನಾಗಿ ಮಾರ್ಪಡಿಸಲಾಗಿದೆ. ಇದರಿಂದ ಮಾರ್ಗಸೂಚಿ ಫಲಕದ ಅಳವಡಿಕೆಯೇ ನಿಷ್ಪ್ರಯೋಜಕವೆನಿಸಿದೆ. ಕೇವಲ ಖಾಸಗಿ ಸಂಸ್ಥೆಯ ಜಾಹಿರಾತು ಎದ್ದು ಕಾಣುತ್ತಿದೆ.

ಜಾಹಿರಾತು ಫಲಕಗಳು ಆಕರ್ಷಕವಾಗಿರಲು ಮಿತಿಯನ್ನು ಮೀರಿ ದೊಡ್ಡದಾಗಿ ನಿರ್ಮಿಸಲಾಗಿದ್ದು, ಇವು ವಾಹನ ಸವಾರರ ಗಮನವನ್ನು ಸೆಳೆದು ವಾಹನ ಚಾಲಕರಿಗೆ ಹಾನಿಯುಂಟುಮಾಡುವಂತಿದೆ.

ರಸ್ತೆ ಪ್ರಕಾರಗಳಿಗೆ ತಕ್ಕಂತೆ ಜಾಹಿರಾತು ಫಲಕಗಳ ಎತ್ತರ ಹಾಗೂ ಸ್ಥಾಪನೆಯ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಇಟ್ಟಿಲ್ಲದಿದ್ದರೆ, ಇವು ದೃಷ್ಟಿ ಮಾರ್ಗವನ್ನು ಹಾನಿಮಾಡುತ್ತವೆ. ಇದರಿಂದ ಟರ್ನಿಂಗ್, ಸಿಗ್ನಲ್, ಚತುಷ್ಪಥಗಳಲ್ಲಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಗಮನ ಸೆಳೆಯುವ ಮತ್ತು ದಾರಿ ಕಡೆಗೆ ಬದಲಿಸುವ ಜಾಹಿರಾತುಗಳು ವಾಹನ ಸವಾರರನ್ನು ತೀವ್ರವಾದ ಅಪಾಯಕ್ಕೆ ದೂಡುತ್ತವೆ. ಕೆಲವು ಸಮೀಕ್ಷೆಗಳು ರಸ್ತೆ ಅಪಘಾತಗಳಲ್ಲಿ ಜಾಹಿರಾತು ಫಲಕಗಳ ಪಾತ್ರವನ್ನೂ ಅನಾವರಣಗೊಳಿಸಿವೆ.

ಜಾಹಿರಾತು ಫಲಕಗಳು ಕೇವಲ ವಾಹನ ಸವಾರರ ಗಮನವನ್ನೇ ಬೇರೆಡೆ ಸೆಳೆಯುವುದಲ್ಲ, ಪಾದಚಾರಿಗಳಿಗೂ ತೊಂದರೆ ಉಂಟುಮಾಡುತ್ತವೆ. ಮಾರ್ಗ ಚಿಹ್ನೆಗಳು ಸ್ಪಷ್ಟವಾಗದೇ ಇರುವುದರಿಂದ ರಸ್ತೆಯಲ್ಲಿ ತಪ್ಪು ನಿರ್ಧಾರಗಳ ಸಾಧ್ಯತೆಗಳು ಹೆಚ್ಚು.

ನಿಯಂತ್ರಣ ಮತ್ತು ಮಾರ್ಗದರ್ಶಿಗಳು:

ಸರ್ಕಾರ ಸೂಕ್ತ ನಿಯಮಗಳು ಹಾಗೂ ಮಾರ್ಗಸೂಚಿ ರೂಪಿಸಬೇಕು. ಜಾಹಿರಾತು ಫಲಕಗಳ ಗಾತ್ರ, ಎತ್ತರ ಮತ್ತು ಸ್ಥಳದ ಬಗ್ಗೆ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

key words: MYSORE TRAFFIC, UNSCIENTIFIC BILLBOARD, SPOILING ROAD SAFETY,

SUMMARY:

The demand for hoardings has increased in the wake of Dasara festivities, which has resulted in an increase in the menace of unscientific hoardings. This is causing inconvenience to motorists.

The huge hoardings erected at Aishwarya Petrol Bunks on Hunsur Road in Mysuru are misleading the motorists. The signboards were put up keeping in mind the tourists entering the city. Now, new billboards have been added to those boards and converted into huge billboards. As a result, the installation of a guideline has become useless. Only the advertisement of a private company stands out.