ಬಿಜೆಪಿ “ನಂಜಿ” ಗೆ ಮೈಸೂರಲ್ಲಿ ಸಿದ್ದರಾಮಯ್ಯ ಬೆಂಬಲಿಗರ “ಪಂಜು”

Mysore, congress, protest, Lokesh

 

ಮೈಸೂರು, ಸೆ.27,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕಪ್ಪುಮಸಿ ಬಳಿಯುವ ದುರುದ್ದೇಶದಿಂದಲೇ ಬಿಜೆಪಿಯ ಕೆಲ ನಾಯಕರು ಅವರ ವಿರುದ್ಧ ಮುಡಾ ಷಡ್ಯಂತ್ರ ರೂಪಿಸಿದ್ದಾರೆ. ಆದರೆ ಹಿಂದುಳಿದ ವರ್ಗಗಳ ಜನನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಯಾರೆಷ್ಟೆ ದಕ್ಕೆ ತಂದರು ಅದು ತಾತ್ಕಾಲಿಕ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಲೊಕೇಶ್‌ ವಿ.ಪಿಯಾ ಹೇಳಿದರು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿದ ಲೊಕೇಶ್‌ ಪಿಯಾ ಬಳಿಕ ಮಾತನಾಡಿ ಹೇಳಿದಿಷ್ಟು..

ಬಿಜೆಪಿಯ ನಾಯಕರುಗಳಂತೆ ಸಿದ್ದರಾಮಯ್ಯ ಅವರು ಕೋರ್ಟ್‌ ನಿಂದ ಯಾವುದೇ ಸಿಡಿ ಪ್ರದರ್ಶನ ಮಾಡದಂತೆ ತಡೆ ತಂದಿಲ್ಲ. ಅವರ ಸಾರ್ವಜನಿಕ ಜೀವನ ಸ್ವಚ್ಛವಾಗಿದೆ. ಇದನ್ನು ಸಹಿಸಲಾಗದೆ ಬಿಜೆಪಿಯ ನೀಲಿ ನಾಯಕರು ಅವರು ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ಇಲ್ಲದ ಅಕ್ರಮವನ್ನು ಇದೇ ಎಂದು ಬಿಂಬಿಸುವ ಸಲುವಾಗಿ ಸುಳ್ಳುಗಳ ಸರಮಾಲೆಯನ್ನೇ ಪೊಣಿಸುತ್ತಿದ್ದಾರೆ. ಇದಕ್ಕೆ ರಾಜ್ಯಪಾಲರನ್ನು ದಾಳವನ್ನಾಗಿಸಿಕೊಂಡಿದ್ದಾರೆ.

ಈಗಾಗಲೇ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿರುವ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇಷ್ಟಾದರೂ ಕೆಲಸವಿಲ್ಲದ ಬಿಜೆಪಿ ನಾಯಕರು, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರೋಡಿಗಿಳಿದಿರುವುದು ಹಾಸ್ಯಾಸ್ಪದವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೂ ಮಣಿಯಬಾರದು. ಯಾವ ಕಾರಣಕ್ಕೂ ರಾಜೀನಾಮೆ ನೀಡಬಾರದು. ನಮ್ಮಂತ ಲಕ್ಷಾಂತರ ಸಿದ್ದರಾಮಯ್ಯ ಅಭಿಮಾನಿಗಳು ಅವರ ಬೆನ್ನಿಗಿದ್ದೇವೆ. ಅವರು ರಾಜೀನಾಮೆ ನೀಡದಂತೆ ಒತ್ತಾಯಿಸಿ ಮೈಸೂರಿನಲ್ಲಿ ಇಂದು ಸಂಜೆ ಪಂಜಿನ ಪ್ರತಿಭಟನೆ ನಡೆಸುತ್ತಿದ್ದೇವೆ.

key words: Mysore, congress, protest, Lokesh