ನಾಳೆ ಮೈಸೂರಿನಲ್ಲಿ ಮಹಿಷಾ ದಸರಾ: ಪುಷ್ಪಾರ್ಚನೆಗೆ ಸಿಗುತ್ತಾ ಅನುಮತಿ?

ಮೈಸೂರು,ಸೆಪ್ಟಂಬರ್,28,2024 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದ್ದು,  ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮೈಸೂರು ದಸರಾ ಉದ್ಘಾಟನೆಗೂ ಮೊದಲೇ ನಾಳೆ ಮಹಿಷ ದಸರಾ ಆಚರಣಾ ಸಮಿತಿಯು ಮಹಿಷಾ ದಸರಾ ಆಚರಣೆಗೆ ಮುಂದಾಗಿದೆ.

ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಮಹಿಷಾ ದಸರಾ ಆಚರಣೆ ಸಮಿತಿಯು ಪ್ಲಾನ್ ರೂಪಿಸಿದ್ದು ಇದಕ್ಕೆ ಪೊಲೀಸರು ಅವಕಾಶ ಕೊಡ್ತಾರ ಎಂಬ ಕುತೂಹಲ ಮೂಡಿದೆ.

ವರೆಗೆ ಒಮ್ಮೆಯಷ್ಟೆ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಚಾಮುಂಡೇಶ್ವರಿಯನ್ನು ನಿಂದಿಸಿದ್ದರು ಎಂದು ಆಕ್ಷೇಪ ವ್ಯಕ್ತವಾಗಿತ್ತು. ಇದಾದ ಬಳಿಕ ಪ್ರತಿವರ್ಷವು ಮಹಿಷಾ ದಸರಾ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದು, ಇದಾದ ಬಳಿಕ ಚಾಮುಂಡಿಬೆಟ್ಟದಲ್ಲಿ ಪುಷ್ಪಾರ್ಚನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿಇದರಿಂದ ಈ ಬಾರಿ ಮಹಿಷಾಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡುತ್ತಾರಾ ಎಂಬ ಕುತೂಹಲ ಮೂಡಿದೆ.

ಈ ನಡುವೆ ಮಹಿಷಾ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಅವಕಾಶ ಕೊಟ್ಟರೆ ಚಾಮುಂಡಿ ಚಲೋ ಮಾಡುವುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದು ಸದ್ಯ ಪುಷ್ಪಾರ್ಚನೆಗೆ ಅನುಮತಿ ಕೊಡುತ್ತಾರೆಯೇ ಇಲ್ಲವೇ ಕಾದು ನೋಡಬೇಕು.

ಅಕ್ಟೋಬರ್ 3 ರಂದು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದೆ.

Key words: Mahisha dasara, tomorrow, Mysore