ಧಾರವಾಡ, ಸೆಪ್ಟೆಂಬರ್ 28,2024 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದುಕೊಂಡೇ ತನಿಖೆ ಎದುರಿಸುವುದಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಾನು ಬಿಜೆಪಿಯ ಕೇಂದ್ರದ ಸಚಿವನಾಗಿ ಬರೆದು ಕೊಡುತ್ತೇನೆ, ಯಾವ ಕಾಲಕ್ಕೂ ನಾವು ಸರ್ಕಾರಕ್ಕೆ ತೊಂದರೆ ಕೊಡಲ್ಲ. ಆದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದರು.
ಆಪರೇಷನ್ ಕಮಲ ಆರೋಪ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಾವು ಯಾವ ಶಾಸಕರಿಗೂ 100 ಕೋಟಿ ರೂಪಾಯಿ ಆಫರ್ ಮಾಡಿಲ್ಲ. 65 ಶಾಸಕರನ್ನು ತೆಗೆದುಕೊಂಡರೆ ಮಾತ್ರ ಸರ್ಕಾರ ರಚನೆ ಸಾಧ್ಯ. ಹಾಗಾದರೇ 65 ಶಾಸಕರಿಗೆ 6,500 ಕೋಟಿ ರೂ. ಆಗಲಿದೆ. ಸುಮ್ಮನೇ ಹುಚ್ಚುಚ್ಚಾಗಿ ಮಾತನಾಡಿದರೆ ಹೇಗೆ ಎಂದು ತಿರುಗೇಟು ನೀಡಿದರು.
Key words: Muda scam, CM Siddaramaia, CBI, Prahlad Joshi