ಅ.2 ರಂದು ಕಿನ್ನಾಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ, ದತ್ತುಗ್ರಾಮ ಉದ್ಘಾಟನಾ ಸಮಾರಂಭ

ಕೊಪ್ಪಳ,ಸೆಪ್ಟಂಬರ್,30,2024 (www.justkannad.in): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಜಿಲ್ಲಾ ವಕೀಲರ ಸಂಘ ಕೊಪ್ಪಳ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಕೊಪ್ಪಳ,  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ, ಗ್ರಾಮ ಪಂಚಾಯತ್ ಕಿನ್ನಾಳ, ಕಿನ್ನಾಳದ ಸಂಘ ಸಂಸ್ಥೆಗಳು, ಹಾಗೂ ಗ್ರಾಮಸ್ಥರುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 2ರಂದು ಸ್ವಚ್ಛತಾ ಹಿ ಸೇವಾ 2024ರ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿಯಲ್ಲಿ ಕಿನ್ನಾಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಕ್ಟೋಬರ್ 02, ಬುಧವಾರ ಬೆಳಗ್ಗೆ 08.00 ಗಂಟೆಗೆ ಕಿನ್ನಾಳ ಕುವೆಂಪು ಶತಮಾನೋತ್ಸ ಮಾದರಿ ಶಾಲೆಯ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು,  ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಅಲಬಣ್ಣ ವಿ. ಕಣವಿ ಆಗಮಿಸಲಿದ್ದಾರೆ. ಕರಿಯಮ್ಮ ಮಲ್ಲಪ್ಪ ಉಪ್ಪಾರ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಕಿನ್ನಾಳ, ದುರಗಪ್ಪ ಡಂಬರ ಉಪಾಧ್ಯಕ್ಷರು, ಗ್ರಾಮ ಪಂಚಾಯುತ್, ಕಿನ್ನಾಳ ಉಪಸ್ಥಿತರಿರಲಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಚಂದ್ರಶೇಖರ. ಸಿ ತಿಳಿಸಿದ್ದಾರೆ.

ದತ್ತು ಗ್ರಾಮದ ಉದ್ಘಾಟನಾ ಸಮಾರಂಭ ಹಾಗೂ ಚಾಲನೆ

ಹಾಗೆಯೇ ಅಕ್ಟೋಬರ್ 3 ರಂದು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ. ಜಿಲ್ಲಾ ಆಡಳಿತ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ, ಹಾಗೂ ಜಿಲ್ಲಾ ವಕೀಲರ ಸಂಘ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಹಿ ಸೇವಾ 2024ರ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿಯಲ್ಲಿ ಕಿನ್ನಾಳ ಗ್ರಾಮವನ್ನು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದತ್ತು ಗ್ರಾಮದ ಉದ್ಘಾಟನಾ ಸಮಾರಂಭ ನಡೆಯಲಿದೆ

ಅಕ್ಟೋಬರ್ 03, ಗುರುವಾರ ಸಂಜೆ 06.00 ಗಂಟೆಗೆ ಕಿನ್ನಾಳ ಗ್ರಾಮದ  ಸ್ವಾಮಿ ವಿವೇಕಾನಂದ ವೃತ್ತ ಬಳಿ ಕಾರ್ಯಕ್ರಮ ನಡೆಯಲಿದ್ದು, ಕೊಪ್ಪಳದ  ಶ್ರೀ ಗವಿಮಠ ಸಂಸ್ಥಾನದ , ಮಹಾಸ್ವಾಮಿಗಳಾದ ಮ.ನಿ.ಪ್ರಜ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಕೊಪ್ಪಳ  ಜಿಲ್ಲಾಧಿಕಾರಿ ನಳಿನ್ ಅತುಲ್  ಮುಖ್ಯ ಕೊಪ್ಪಳ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ಕೊಪ್ಪಳ ಜಿಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರೆಸಿದ್ದಿ,   ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಲಬಣ್ಣ ವಿ. ಕಣವಿ  ಕೊಪ್ಪಳ ಆಗಮಿಸಲಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಚಂದ್ರ ಶೇಖರ. ಸಿ ತಿಳಿಸಿದ್ದಾರೆ.

Key words: Cleanliness program, Kinnala village, koppala