ಮುಡಾ ಆಯುಕ್ತರಿಗೆ ನಿವೇಶನ ಹಿಂಪಡೆಯುವ ಪತ್ರ ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ

MUDA, site, letter, Yatindra, Mysore

 

ಮೈಸೂರು, ಅ.01,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಖುದ್ದು ಮುಡಾ ಆಯುಕ್ತರನ್ನು ಭೇಟಿ ಮಾಡಿ ನಿವೇಶನ ಹಿಂಪಡೆಯುವ ಪತ್ರ ಸಲ್ಲಿಸಿದ್ದಾರೆ.

ಸಿಎಂ  ಸಿದ್ದರಾಮಯ್ಯ ಅವರ ಮಡದಿ ಪಾರ್ವತಿ ಅವರು ಮುಡಾ ನಿವೇಶನ ಹಿಂದಿರುಗಿಸಿದ ಬಗ್ಗೆ ಮಾಧ್ಯಮಗಳಲ್ಲಿ ನಿನ್ನೆಯಷ್ಟೆ ವರದಿಯಾಗಿತ್ತು. ಖುದ್ದು ಸಿಎಂ ಸಹ ಟ್ವೀಟರ್‌ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮುಡಾ ಆಯುಕ್ತ ರಘುನಂದನ್ ಅವರನ್ನು ಮಾಧ್ಯಮದವರು ಇಂದು ಭೇಟಿ ಮಾಡಿ ವಿಚಾರಿಸಿದಾಗ, ಇಂದು ಬೆಳಗ್ಗೆ ಪಾರ್ವತಿ ಸಿದ್ದರಾಮಯ್ಯ ಅವರ ಪುತ್ರ ಎಂ ಎಲ್ ಸಿ ಡಾ ಯತಿಂದ್ರ ಕಚೇರಿಗೆ ಬಂದಿದ್ದರು. 14 ಸೈಟ್ ಗಳನ್ನ ಹಿಂತಿರುಗಿಸುವ ಬಗ್ಗೆ ಪತ್ರ ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಮುಂದಿನ ಕ್ರಮ. ನಿವೇಶನ ಹಿಂತಿರುಗಿಸಿದರೆ ವಾಪಾಸ್ ತೆಗೆದುಕೊಳ್ಳಬಹುದಾ ಎನ್ನುವ ಮಾಹಿತಿ ತಿಳಿದುಕೊಳ್ಳಲಾಗುವುದು. ಸ್ವಹಿಚ್ಚೆಯಿಂದ 14 ಸೈಟ್ ಗಳನ್ನು ವಾಪಾಸ್ ನೀಡುವ ಬಗ್ಗೆ ಪತ್ರ ತಂದು ಖುದ್ದಾಗಿ ನಮ್ಮನ್ನ ಭೇಟಿ ಮಾಡಿ ನೀಡಿದ್ದಾರೆ ಎಂದು ಮುಡಾ ಆಯುಕ್ತ ರಘುನಂದನ್ ಹೇಳಿದರು.

key words; MUDA, site, letter, Yatindra, Mysore