ಸಿದ್ದರಾಮಯ್ಯಗೆ MUDA ಸಂಕಷ್ಟ : ಸ್ವಗ್ರಾಮದವರಲ್ಲಿ ಭುಗಿಲೆದ್ದ ಆಕ್ರೋಶ..!

Muda crisis for Siddaramaiah: Anger erupts among siddaramanahundi villagers

 

ಮೈಸೂರು, ಅ.01,2024: (www.justkannada.in news) ಮುಡಾಗೆ ನಿವೇಶನ ವಾಪಸ್ಸು ನೀಡಿರುವುದು ನಮ್ಮ ದೊಡ್ಡಮ್ಮನ ದೊಡ್ಡಗುಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹೋದರ ರಾಮೇಗೌಡರ ಪುತ್ರ ರಘು ಹೇಳಿಕೆ.

ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ವಾಸಿಸುತ್ತಿರುವ ರಘು “ನ್ಯೂಸ್‌ ಫಸ್ಟ್‌ “ ವಾಹಿನಿ ಜತೆ ಮಾತನಾಡಿ ಹೇಳಿದಿಷ್ಟು..

1983 ರಲ್ಲಿ ಸಿದ್ದರಾಮಯ್ಯರವರು ರಾಜಕೀಯಕ್ಕೆ ಬಂದಿದ್ದಾರೆ. ಇವತ್ತಿನ ವರೆಗೂ ಕುಟುಂಬಸ್ಥರನ್ನ ಹತ್ತಿರಕ್ಕೂ ಕೂಡಿಲ್ಲ. ನಾವ್ಯಾರೂ ಕೆಲಸಗಳಿಗೆ ಅವರ ಬಳಿ ಹೋಗಿಲ್ಲ. ಏನಾದ್ರು ಹಂಗಿದ್ದಿದ್ರೆ  ನಾವೆಲ್ಲ ಇವತ್ತು ಹೈಫೈ ಜೀವನ ಮಾಡ್ಬೋದಿತ್ತು. ನಾನು ಇಂದಿಗೂ ಬೈಕ್ ಲೋನ್ ಕಟ್ಟುತ್ತಿದ್ದೆನೆ. ದೊಡ್ಡಮ್ಮ ಹೊರಗು ಬರುವವರಲ್ಲ.

ಎರಡನೇ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬಿಜೆಪಿ-ಜೆಡಿಎಸ್ ಗೆ ಸಿದ್ದರಾಮಯ್ಯ ಎರಡನೆ ಬಾರಿ ಸಿಎಂ ಆಗಿರೋದನ್ನ ಸಹಿಸೋಕೆ ಆಗ್ತಿಲ್ಲ. ಆದ್ದರಿಂದಲೇ ಕುತಂತ್ರ ಮಾಡಿದರು. ಜತೆಗೆ ಸಿದ್ದರಾಮಯ್ಯ ಅವರು ಜಾರಿಗೆ ತಂದ ಪಂಚ ಯೋಜನೆಗಳ ಯಶಸ್ಸನ್ನ ಸಹಿಸಿಕೊಳ್ಳಲು ವಿಪಕ್ಷಗಳಿಗೆ ಆಗ್ತಿಲ್ಲ. ಸರ್ಕಾರ ಅಸ್ಥಿರಗೊಳಿಸಬೇಕು ಎಂದು ಬಿಜೆಪಿ-ಜೆಡಿಎಸ್ ಈ ರೀತಿ ಮಾಡ್ತಿದ್ದಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸುವ ಉದ್ದೇಶ ಬಿಟ್ಟರೇ ಬೇರೆ ಏನೂ ಅವರಿಗಿಲ್ಲ‌.

ದೊಡ್ಡಪ್ಪರಿಗೆ ಕಳಂಕ ಬರಬಾರದು ಎಂದು ದೊಡ್ಡಮ್ಮ ಸೈಟ್ ವಾಪಸ್ಸು ನೀಡಿದ್ದಾರೆ. ಇದು ನಮ್ಮ ದೊಡ್ಡಮ್ಮರವರ ದೊಡ್ಡತನ. ಮುಡಾ ಸೈಟ್ ಪ್ರಕರಣದಿಂದ ಪಾರ್ವತಮ್ಮ ಬಹಳ ಬೇಜಾರು ಮಾಡ್ಕೊಂಡಿದ್ದಾರೆ‌.

ಸಿದ್ದರಾಮಯ್ಯ ಹುಟ್ಟೂರಲ್ಲಿ ಸಿಡಿದ ಮಹಿಳೆಯರು :

ಇದೆಕ್ಕೆಲ್ಲ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಕಾರಣ. “ನ್ಯೂಸ್ ಫಸ್ಟ್ “ ಬಳಿ ಸಿದ್ದರಾಮನಹುಂಡಿ ಗ್ರಾಮದ ಮಹಿಳೆಯರ  ಆಕ್ರೋಶದ ನುಡಿ. ಮೈಸೂರು ತಾಲೂಕಿನ ಸಿದ್ದರಾಮನಹುಂಡಿ.

ನಮಗೆ ಸಿದ್ದರಾಮಯ್ಯ ಎಲ್ಲ ಸೌಲಭ್ಯ ಕೊಟ್ಟಿದ್ದಾರೆ. ಅನ್ನ, ಬಸ್, ದುಡ್ಡು ಎಲ್ಲವನ್ನು ಸಿದ್ದರಾಮಯ್ಯರಿಂದ ಕಂಡಿದ್ದೇವೆ. ಅವರು ರಾಜೀನಾಮೆ ಕೊಡೋದು ನಮಗೆ ಇಷ್ಟ ಇಲ್ಲ.

ಸಿಎಂ ಪತ್ನಿ ಪಾರ್ವತಮ್ಮರನ್ನ ನಾವು ನೋಡೆ ಇಲ್ಲ. ಊರಿಗೆ ಬಂದ್ರು ದೇವಸ್ಥಾನ ಬಿಟ್ಟರೇ ಎಲ್ಲೂ ಹೋಗಲ್ಲ. ಸಿಎಂಗಾಗಿ ನಾವು ಇಂದು ಮಹದೇಶ್ವರ ಬೆಟ್ಟಕ್ಕೆ ಹೋಗ್ತಿದ್ದೇವೆ. ಆರೋಪಗಳಿಂದ ಮುಕ್ತಾವಗಲಿ ಎಂದು ಮಾದಪ್ಪನಿಗೆ ಪೂಜೆ ಸಲ್ಲಿಸುತ್ತೇವೆ. ಮುಂದಿನ ವರ್ಷ ಮಹಿಳೆಯರೆಲ್ಲ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಹರಕೆ ತೀರಿಸುತ್ತೇವೆ.

ಬಿಜೆಪಿ-ಜೆಡಿಎಸ್ ಷಡ್ಯಂತ್ರ :

ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಮುಡಾ ನಿವೇಶನ ಹಗರಣದ ಆರೋಪ. ಈ ಎಲ್ಲ ಘಟನೆಯಿಂದ ದೊಡ್ಡಮ್ಮ ಪಾರ್ವತಿ ನೊಂದುಕೊಂಡಿದ್ದಾರೆ. “ ನ್ಯೂಸ್ ಫಸ್ಟ್ “ ಜೊತೆ ಸಿದ್ದರಾಮಯ್ಯ ಸಹೋದರನ ಪುತ್ರ ಸಿದ್ದರಾಮು ಹೇಳಿಕೆ.

ಸಿದ್ದರಾಮಯ್ಯರಿಗೆ 40 ವರ್ಷ ಯಾವುದೇ ಕಳಂಕ ಇಲ್ಲ. ಈಗ ಕಳಂಕ ತರಬೇಕೆಂದು ಷಡ್ಯಂತ್ರ ಮಾಡ್ತಿದ್ದಾರೆ. 3.16 ಜಮೀನು ದಾನವಾಗಿ ದೊಡ್ಡಮ್ಮ ಪಡೆದಿದ್ರು. 50:50 ಅನುಪಾತಿದಲ್ಲಿ 14 ಸೈಟ್ ಕೊಟ್ಟಿದ್ದಾರೆ. ಆ ಸಂದರ್ಭ ಬಿಜೆಪಿಯವರೇ ಸಿಎಂ, ಮುಡಾ ಅಧ್ಯಕ್ಷರಿದ್ದರೂ. ಸಿದ್ದರಾಮಯ್ಯ ಹಿಂದುಳಿದ ವರ್ಗ ಪರ ಇದ್ದಾರೆ ಎಂದು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ. ವಿರೋಧ ಪಕ್ಷದವರಿಗೆ ಸಿಎಂ ಸ್ಥಾನ ಇಳಿಸುವ ಏಕೈಕ ಉದ್ದೇಶವಿದೆ. ದೊಡ್ಡಮ್ಮ ಯಾವುದೇ ತಪ್ಪು ಮಾಡಿಲ್ಲ. ಆದ್ರೆ ಪಾರ್ವತಮ್ಮ ತಪ್ಪು ಮಾಡಿದ್ದಾರೆ ಎಂದು ಬಿಂಬಿಸಲು ಹುನ್ನಾರ.

ಈ ಎಲ್ಲ ಬೆಳವಣಿಗೆ ಬಳಿಕ ಎರಡ್ಮೂರು ಬಾರಿ ಮಾತನಾಡ್ದೆ. ಹಸ್ತಕ್ಷೇಪ ಮಾಡದಿದ್ದರೂ ಈ ರೀತಿ ಮಾಡ್ತಿದ್ದಾರೆ ಎಂಬ ನೋವು ದೊಡ್ಡಮ್ಮ ಪಾರ್ವತಿಯವರಲ್ಲಿದೆ. 100% ಈ ಎಲ್ಲ ಆರೋಪಗಳಿಂದ ದೊಡ್ಡಪ್ಪ, ದೊಡ್ಡಮ್ಮ ಮುಕ್ತರಾಗಿ ಹೊರಬರ್ತಾರೆ. ನ್ಯೂಸ್ ಫಸ್ಟ್ ಗೆ ಸಿಎಂ ಸಹೋದರನ ಪುತ್ರ ಸಿದ್ದರಾಮು ಹೇಳಿಕೆ.

key words: MUDA crisis, CM Siddaramaiah, Anger erupts, among, siddaramanahundi villagers, Mysore