ಮೈಸೂರು, ಅಕ್ಟೋಬರ್,1,2024 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವದಸರಾ ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು.
ಅರಮನೆ ಆವರಣದಲ್ಲಿ ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಅರಿಶಿನ ಕುಂಕುಮ, ವಿಳೆದೆಲೆ, ಬಾಳೆಹಣ್ಣು, ಹಾಗೂ ತೆಂಗಿನಕಾಯಿ, ಸೀರೆ ವಿತರಿಸುವ ಮೂಲಕ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾ. ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗ ಸದಸ್ಯರುಗಳು ಬಾಗಿನ ವಿತರಿಸಿದರು.
ಬಳಿಕ ಮಾತನಾಡಿದ ಕರ್ನಾಟಕ ಸರ್ಕಾರದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಬಿ. ಪುಷ್ಪ ಅಮರನಾಥ್, ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿಯಾಗಲಿದೆ. ಆ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದರು
ನಂತರ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ನವರಾತ್ರಿಯ ಮೂಲಕ ಪ್ರಕೃತಿಗೆ ನಮಿಸಿ, ಪ್ರಕೃತಿಯ ಶಕ್ತಿ ತಾಯಿ ದುರ್ಗಾಮಾತೆಯನ್ನು ಸರ್ವ ಸ್ತ್ರೀಯರೆಲ್ಲರೂ ಕಾಣುವುದೇ ನವರಾತ್ರಿ, ನವರಾತ್ರಿಗೆ ಅಪಾರ ಶಕ್ತಿ ಇದ್ದು 9 ದಿನಗಳ ಕಾಲ ಆಂತರಿಕ ದ್ವೇಷ, ಅಸೂಯೆ ತೊಲಗಿಸಿ ದೇವಿಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನವರಾತ್ರಿಯ ವಿಶೇಷತೆ ಎಂದರು.
ಇದೇ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ಡಿ ಸಿ ಎಫ್ ಡಾ. ಐಬಿ ಪ್ರಭುಗೌಡ, ಸಮಾಜ ಸೇವಕರಾದ ಡಾ. ಎಂ. ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಾಗಮಣಿ ಜೆ, ದರ್ಶನ್, ರೇಣುಕಾ ಹೊರಕೇರಿ, ಸವಿತಾ ಘಾಟ್ಕೆ, ಸಂತೋಷ್ ಕಿರಾಳು, ಶಾರದಾ ಹಾಗೂ ಇನ್ನಿತರರು ಹಾಜರಿದ್ದರು.
Key words: Mysore Dasara, Mawuta and Kavadiga, families, bagina