ನಾನೂ ರಾಜೀನಾಮೆ ಕೊಡೋದಾದ್ರೆ ಕೊಡೋಣ ಬಿಡಿ: ಶಾಸಕ ಜಿಟಿಡಿ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿಕೆ ತಿರುಗೇಟು

ಬೆಂಗಳೂರು, ಅಕ್ಟೋಬರ್,3,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯತೆ ಇಲ್ಲ. ರಾಜೀನಾಮೆ ಕೊಡುವುದಾದರೇ ಎಫ್ ಐಆರ್ ಆಗಿರುವ ಎಲ್ಲ ನಾಯಕರೂ ರಾಜೀನಾಮೆ ನೀಡಲಿ ಎಂದು ಹೇಳಿ ತಮಗೆ ಟಾಂಗ್ ಕೊಟ್ಟಿದ್ದ ಸ್ವಪಕ್ಷದ ಶಾಸಕ ಜಿಟಿ ದೇವೇಗೌಡರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ ಜಿಟಿ ದೇವೇಗೌಡ ಮಾತನಾಡಿದ್ದ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಪರ ಮಾತನಾಡಲಿ ಬಿಡಿ.  ಏಕೆ ಮಾತನಾಡಬಾರದು. ಎಫ್ ಐಆರ್ ಆದ ಮೇಲೆ ಯಾರ ರಾಜೀನಾಮೆಯನ್ನೂ ನಾನು ಕೇಳಿಲ್ಲ ಸಿದ್ದರಾಮಯ್ಯನವರ ರಾಜೀನಾಮೆಯನ್ನ ನಾನು ಕೇಳೀಲ್ಲ. ಸಿಎಂ  ಇತ್ತೀಚಿನ ನಡವಳಿಕೆಯಿಂದ ರಾಜೀನಾಮೇ ಕೇಳಿದ್ದೇನೆ.  ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ರಾಜೀನಾಮೆ ಕೇಳಿದ್ದೆ. ನಾನೂ ರಾಜೀನಾಮೆ ಕೊಡೋದಾದ್ರೆ ಕೊಡೋಣ ಬಿಡಿ ಎಂದು ಲೇವಡಿ ಮಾಡಿದರು.

ಯಾವ ಅಧಿಕಾರಿಗಳ ಮೂಲಕ ಸಾಕ್ಷಿಗಳನ್ನ ನಾಶ ಮಾಡುತ್ತಿದ್ದಾರೆ. ಅದರ ಮೇಲೆ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದೀನಿ. ನನ್ನ ಮೇಲೆ ಎಫ್ ಐಆರ್ ಆಗಿದೆ.  ಏನಿದೆ ಎಫ್ ಐಆರ್ ಮಾಡೋಕೆ  ಆಡಳಿತಾತ್ಮಕ ನಿರ್ಧಾರಕ್ಕೆ ಹೋಗಿ ಕೆಲವರು ಕಷ್ಟ ಪಡುತ್ತಿದ್ದಾರೆ ಎಂದು ಹೆಚ್ ಡಿಕೆ ಹೇಳಿದರು.

Key words: CM, resign, MLA, GT devegowda, Union Minister, HDK