ನೈತಿಕತೆಯ ಪಾಠ ಮಾಡುವ ಆರ್‌.ಅಶೋಕ್‌ ಮೊದಲು ರಾಜೀನಾಮೆ ನೀಡಲಿ- ಸಚಿವ ಪ್ರಿಯಾಂಕ್ ಖರ್ಗೆ

 

ಬೆಂಗಳೂರು,ಅಕ್ಟೋಬರ್, 3,2024 (www.justkannada.in): ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಭೂಹಗರಣದ ಬಗ್ಗೆ ನಿನ್ನೆ ದಾಖಲಾತಿ ಕೇಳಿದ ಹಗರಣವನ್ನು ಬಯಲು ಮಾಡಿದ್ದೇವೆ. ಈವರೆಗೂ ನೈತಿಕತೆಯ ಪಾಠ ಮಾಡುತ್ತಿದ್ದ ಆರ್‌.ಅಶೋಕ್‌ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನೈತಿಕತೆಯ ಪಾಠ ಮಾಡಿದ ಬಿಜೆಪಿಯ ನಾಯಕರು ಮೊದಲು ತಮ ತಪ್ಪುಗಳಿಗಾಗಿ ರಾಜೀನಾಮೆ ನೀಡಲಿ. ನಂತರ ಬೇರೆಯವರ ಬಗ್ಗೆ ಮಾತನಾಡಲಿ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ  ಸಿಬಿಐ, ಐಟಿ, ಇಡಿ ಗಳನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ. ರಾಜಭವನವನ್ನು ಸ್ವಂತ ಕಚೇರಿಯ ಹಾಗೆಯೇ ಬಿಜೆಪಿಯವರು ಬಳಸುತ್ತಿದ್ದಾರೆ. ರಾಜ್ಯಪಾಲರು ಕಾಂಗ್ರೆಸಿಗರ ಪ್ರಕರಣಗಳು ಬಂದಾಗ 24 ಗಂಟೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಬಿಜೆಪಿಯ ವಿರುದ್ಧ ದೂರು ನೀಡಿದರೆ ಅದು ರಾಜಭವನದಲ್ಲೇ ಉಳಿದುಹೋಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Key words: R. Ashok, resign,  first, Minister, Priyank Kharge