ಹೆಚ್ ಡಿಕೆ ಮೇಲೆ 19 FIR : ರಾಜಿನಾಮೆ ಕೇಳಲು ಯಾವ ನೈತಿಕತೆ ಇದೆ- ಜಿಟಿಡಿ ಹೇಳಿಕೆ ಸಮರ್ಥಿಸಿ ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು, ಅಕ್ಟೋಬರ್,5,2024 (www.justkannada.in):    ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೇಲೆ 19 ಎಫ್‌ಐಆರ್ ಇವೆ. ಎಫ್‌ಐಆರ್ ಆದ ತಕ್ಷಣ ಸ್ಥಾನದಲ್ಲಿ ಇರಬಾರದು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ನೀವು ಇರಬಹುದೇ ಕುಮಾರಸ್ವಾಮಿಯವರೇ ? ಕೇಂದ್ರ ಸಚಿವ ಸ್ಥಾನದಲ್ಲಿದ್ದಿರಿ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಲು ನಿಮಗೆ ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೇಲೆ 10 ಕ್ರಿಮಿನಲ್ ಎಫ್‌ಐಆರ್ ಇವೆ. ಆರ್.ಅಶೋಕ್ ಬಿಡಿಎ ಜಾಗವನ್ನು ಕಬಳಿಸಿ ಮತ್ತೆ ಸರ್ಕಾರಕ್ಕೆ ವಾಪಸ್ ಕೊಡುವ ಕೆಲಸ ಮಾಡಿದ್ದಾರೆ.  ನಿವೃತ್ತ ಆರ್ಮಿ ನೌಕರ ಕೇಸ್ ಹಾಕಿದಾಗ ವಾಪಸ್ ಕೊಡುತ್ತಾರೆ. ಇವರು ವಾಪಸ್ ಕೊಟ್ಟರೆ ಸಾಲದು ಶಿಕ್ಷೆ ಆಗಬೇಕು ಎಂದು ಹೈಕೋರ್ಟ್ ಮೊರೆ ಹೋಗುತ್ತಾರೆ.  ಹೈಕೋರ್ಟ್ ಸೈಟ್ ವಾಪಸ್ ಕೊಟ್ಟಾಯಿತು ಬಿಟ್ಟು ಬಿಡಿ ಎಂದು ಹೇಳಿದೆ. ಇವರು ಯಾವ ನೈತಿಕೆ ಇಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ರಾಜಿನಾಮೆ ಕೇಳುತ್ತಾರೆ.? ಮೂಡಾ 14 ಸೈಟ್ ವಾಪಸ್ ಕೊಟ್ಟಿದ್ದಾರೆ. ಮೂಡಾ ಆಯುಕ್ತರನ್ನು ವಜಾ ಮಾಡಿ ಅಂತಾರೆ, ವಾಪಸ್ ಕೊಡದಿದ್ದರೆ ಏಕೆ ಕೊಟ್ಟಿಲ್ಲ ಅಂತಾರೆ ?  ಕೊಟ್ಟರೆ ಕದ್ದ ಮಾಲು ವಾಪಸ್ ಕೊಟ್ಟಿದ್ದೀರಾ ಅಂತಾರೆ.  ಏನ್ ಮಾಡಿದರೂ ಮಾತಾಡ್ತಾರೆ. ಕುಮಾರಸ್ವಾಮಿ ವಿರುದ್ದ ನಾವೂ ರಾಜೀನಾಮೆ ಕೊಡಿ ಅಂತಾ ಪ್ರತಿಭಟನೆ ಮಾಡುತ್ತೇವೆ. ವಿಜಯ್ ಟಾಟಾ 50 ಕೋಟಿ ಕೇಳ್ತಾ ಇದ್ದಾರೆ ಎಂದು ಎಫ್‌ಐಆರ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಿನಾಮೆ ಕೇಳಲು ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.

ಸ್ನೇಹಮಯಿ ಕೃಷ್ಣ 40 ಕ್ರಿಮಿನಲ್ ಮೊಕದ್ದಮೆ: ದಾಖಲೆ ಕೊಡುತ್ತೇವೆ

ಸ್ನೇಹಮಯಿ ಕೃಷ್ಣಗೆ ಇಡಿ ಸಮನ್ಸ್ ನೀಡಿದೆ. ಇವರ ಆಪಾದನೆಗೆ ಪೂರಕವಾದ ದಾಖಲೆಗಳನ್ನು ಕೊಡಬೇಕು ಎಂದು ಸಮಸ್ಸ್ ನೀಡಿದೆ. ದೂರು ದಾಖಲು ಮಾಡುವವರ ಸಂಪೂರ್ಣ ಪೂರ್ವಾಪರ ಚರಿತ್ರೆಯನ್ನು ಹಾಕಿರುವುದು ಸಮನ್ಸ್ ಕಾಪಿಯಲ್ಲಿ ಇದೆ. ಸ್ನೇಹಮಯಿ ಕೃಷ್ಣ ರವರ ವಿರುದ್ಧ ಮೈಸೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 40 ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.  ಅಷ್ಟು ದಾಖಲೆಗಳನ್ನು ನಾವು ಇಡಿಯವರಿಗೆ ಕಳುಹಿಸುತ್ತಿದ್ದೇವೆ. ನಾಟ್ ಅಪ್ಲಿಕಬಲ್ ಎಂದು ಕೊಟ್ಟಿದ್ದಾರೆ, ಅದು ಗೊತ್ತಿಲ್ಲ. ಇಡಿಯಲ್ಲಿ ದೂರು ದಾಖಲು ಮಾಡಿರುವುದು ಸಾಬೀತು ಆಗಬೇಕು. ಇಲ್ಲದಿದ್ದರೆ ದೂರುದಾರರ ಮೇಲೆ ಕ್ರಮ ಆಗುತ್ತದೆ ಎಂದು  ಸ್ನೇಹಮಯಿ ಕೃಷ್ಣ ವಿರುದ್ದ ಹರಿಹಾಯ್ದರು.

ಇಡಿ ಎಫ್‌ಐಆರ್ ವಿರುದ್ಧ ಮೇಲ್ಮನವಿ ಹೋಗಿಲ್ಲ ಏಕೆ ? ಇಡಿಯಲ್ಲಿ ಎಫ್‌ಐಆರ್ ಮಾಡಿದೆ ಎಂದು ಇಡಿ ಯವರು ಹೇಳಿದ್ದಾರಾ ? ಸಿದ್ದರಾಮಯ್ಯ , ಮೇಡಮ್ ವಿರುದ್ಧ ಎಫ್‌ಐಆರ್ ಎಲ್ಲಿ ಆಗಿದೆ ?  ಆದರೆ ಮಾಧ್ಯಮದಲ್ಲಿ ಬಂದಿದೆ. ಸ್ನೇಹಮಯಿ ಕೃಷ್ಣ ಇಡಿ ಅಧಿಕಾರಿಗಳಿಗೆ ಪ್ರೋಸಿಡಿಂಗ್ಸ್ ಗಳನ್ನು ಕೊಟ್ಟಿದ್ದಾರೆ ಅಷ್ಟೇ. ಸೆಟಲ್ಮೆಂಟ್ ಡೀಡ್ ಸರಿಯಾಗಿ ಆಗಿಲ್ಲ. ಸಿದ್ದರಾಮಯ್ಯ ರವರ 50:50 ಅನುಪಾತ ದಲ್ಲಿ ಮನಿಲಾಂಡ್ರಿಂಗ್ ವಿಚಾರವೇ ನಡೆದಿಲ್ಲ?  ಅಂದ ಮೇಲೆ ಇಡಿ ವ್ಯಾಪ್ತಿಯಲ್ಲಿ ಹೇಗೆ ಬರುತ್ತದೆ ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾಗಲಿಕ್ಕೆ ನಾಲಾಯಕ್.

ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾಗಲಿಕ್ಕೆ ನಾಲಾಯಕ್. ಸುಳ್ಳು ಸುದ್ದಿಯನ್ನು ಹರಡಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಪರ ಬ್ಯಾಟ್ ಬೀಸಿದ ಶಾಸಕ ಜಿಟಿಡಿ ಹೇಳಿಕೆ ಸಮರ್ಥನೆ

ಸಿಎಂ  ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ ಶಾಸಕ ಜಿಟಿ ದೇವೇಗೌಡ ಮಾತನಾಡಿದ್ದನ್ನು ಸಮರ್ಥಿಸಿಕೊಂಡ ಎಂ.ಲಕ್ಷ್ಮಣ್, ಚಾಮುಂಡೇಶ್ವರಿ ಸನ್ನಿಧಿ ಸತ್ಯವನ್ನಷ್ಟೇ ಹೇಳಿದ್ದಾರೆ. ತಾಯಿ ಸನ್ನಿಧಿಯಲ್ಲಿ ಸುಳ್ಳು ಹೇಳೋಕೆ ಆಗುತ್ತಾ.? ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ.  ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆಗಳ ತನ್ನಿ ಅಂದರೆ ಸುಖಾ ಸುಮ್ಮನೆ ಸಿಎಂ ವಿರುದ್ಧ ಟೀಕೆ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜಿನಾಮೆ ಕೊಟ್ಟರೆ ನೀವುಗಳು ಕೊಡಬೇಕು ಕೊಡ್ತೀರಾ ಅಂತ ಕೇಳಿದ್ದಾರೆ. ಅದರಲ್ಲೇನು ತಪ್ಪಿಲ್ಲ ಎಂದರು.

Key words: 19 FIR, HDK, resignation, KPCC, M. Laxman