ಪಿ.ಎನ್.ದೇಸಾಯಿ ಸಮಿತಿಗೆ ಬರೋಬ್ಬರಿ 8 ಲಕ್ಷ ಪ್ರತಿ ಜೆರಾಕ್ಸ್..! ಮುಡಾಗೆ ಎದುರಾಯ್ತು ದೊಡ್ಡ ಸವಾಲು

ಮೈಸೂರು,ಅಕ್ಟೋಬರ್,5,2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ  ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ  ನೇತೃತ್ವದ ಏಕಸದಸ್ಯ ಆಯೋಗ ರಚನೆ ಮಾಡಿದ್ದು ಈ ಆಯೋಗಕ್ಕೆ ಇದೀಗ ಮುಡಾ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಪುಟಗಳ ಜೆರಾಕ್ಸ್ ಪ್ರತಿ ನೀಡಬೇಕಾದ ದೊಡ್ಡ ಸವಾಲು ಎದುರಾಗಿದೆ.

ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ಸಮಿತಿಗೆ 8 ಲಕ್ಷ  ಜೆರಾಕ್ಸ್ ಪ್ರತಿ ನೀಡಬೇಕಾದ ಅನಿವಾರ್ಯತೆ ಮುಡಾಗೆ ಬಂದಿದ್ದು, ಎಂಟು ಲಕ್ಷ ಪುಟಗಳ ಜೆರಾಕ್ಸ್ ಹಾಗು ಸರ್ಟೀಫೈಡ್ ಕಾಪಿ ಪಡೆಯುವುದೇ  ಮುಡಾಗೆ ದೊಡ್ಡ ಸವಾಲು ಆಗಿದೆ.

ಈ ಹಿನ್ನೆಲೆಯಲ್ಲಿ ಈ ಮೊದಲು‌ ಮೇ ತಿಂಗಳಲ್ಲಿ 9 ಜೆರಾಕ್ಸ್ ಮೆಷಿನ್ ಖರೀದಿ ಮಾಡಲಾಗಿತ್ತು. ಇದಕ್ಕಾಗಿ ಮುಡಾ ಬರೋಬ್ಬರಿ 19 ಲಕ್ಷ ರೂ ವ್ಯಯಿಸಿ‌ತ್ತು. ಸದ್ಯ ಮುಡಾದಲ್ಲಿ 14 ಕ್ಕೂ ಹೆಚ್ಚು ಮಷಿನ್ ಗಳಿದ್ದು, ಎಲ್ಲಾ ಮೆಷಿನ್ ಗಳಲ್ಲಿ‌ ಜೆರಾಕ್ಸ್ ಮಾಡಿದರೂ ಕಾರ್ಯ ಮುಗಿಯುವುದಿಲ್ಲ. ಹೀಗಾಗ ಮುಡಾ ಅಧಿಕಾರಿಗಳು  ಪಿ.ಎನ್.ದೇಸಾಯಿ‌ ಆಯೋಗಕ್ಕಾಗಿಯೇ ನಾಲ್ಕು ಪ್ರತ್ಯೇಕ ಜೆರಾಕ್ಸ್ ಮೆಷಿನ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮುಡಾ ಆಯುಕ್ತ ರಘುನಂದನ್,  ನಾವು ಯಾವುದೇ ಮಷಿನ್ ಗಳನ್ನ ಖರೀದಿ‌ ಮಾಡಿಲ್ಲ. ಯಾವ ಮಷಿನ್‌ಗಳನ್ನ ಬಾಡಿಗೆಗೂ ಪಡೆದಿಲ್ಲ. 8 ಲಕ್ಷ ಪ್ರತಿಗಳನ್ನ ನಾವು ನೀಡಬೇಕಾಗಿದೆ. ಆ ಕಾರಣಕ್ಕೆ ಮುಡಾದಲ್ಲಿರುವ ಮೆಷಿನ್ ಗಳನ್ನೇ ಬಳಸಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

Key words: muda, 8 lakhs, Xerox, PN Desai committee, big challenge