ಟವರ್ ಲೊಕೇಶನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ- ನಟ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ

ಬೆಂಗಳೂರು,ಅಕ್ಟೋಬರ್,10,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದಾರೆ.

ಇಂದು 57ನೇ ಸಿಸಿ ಎಚ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲ ಸಿ.ವಿ ನಾಗೇಶ್, ಎಸ್ ಪಿಪಿ ಪ್ರಸನ್ನರನ್ನು ತನಿಖಾಧಿಕಾರಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಹೇಳಿ ಜೂನ್ 9ರ ಟವರ್ ಲೊಕೇಶನ್, ಗೂಗಲ್ ಆಡ್ರೆಸ್, ಗೂಗಲ್ ಮ್ಯಾಪ್ ಆಧರಿಸಿದ ಮ್ಯಾಪ್ ಸಲ್ಲಿಸಿದರು.

ವಾದ ಮುಂದುವರೆಸಿದ ಸಿ.ವಿ ನಾಗೇಶ್, ಇದೇ ತಂತ್ರಜ್ಞಾನ ಆಧರಿಸಿ ಕೃತ್ಯದ ಸಮಯದಲ್ಲಿ  ದರ್ಶನ್  ಬೇರೆಡೆ ಇದ್ದರೆಂದು ತೋರಿಸಬಹುದು ಅಥವಾ ದರ್ಶನ್ ತನಿಖಾಧಿಕಾರಿ ಕಚೇರಿಯಲ್ಲಿದ್ದರೆಂದು ತೋರಿಸಬಹುದು . ಕೃತ್ಯದ ಸಮಯದಲ್ಲಿ ಬೇರೆಡೆ ಇದ್ದರೆಂದು ತೋರಿಸಬಹುದು ಟವರ್ ಲೊಕೇಶನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆರೋಪಪಟ್ಟಿಯಲ್ಲಿ ಗೂಗಲ್ ಮ್ಯಾಪ್ ಆಧರಿಸಿ ನಕ್ಷೆ ರಚಿಸಿದ್ದಾರೆ. ಆದರೆ ಇದು ಪೊಲೀಸರು ತಮಗೆ ಬೇಕಾದಂತೆ ಸಿದ್ದಪಡಿಡಿಸುವ ನಕ್ಷೆ.  ದರ್ಶನ್ ಫೋಟೊವನ್ನು ಈ ಮ್ಯಾಪ್ ನಲ್ಲಿ ಅಂಟಿಸಿದ್ದಾರೆ.  ಇದು ಗೂಗಲ್ ಪಿಕ್ಷರ್ ಅಲ್ಲ. ಸ್ಯಾಟಲೈಟ್ ಪಿಕ್ಚರ್ ಅಲ್ಲ.  ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಅಂಟಿಸುವ ಪೋಟೊ.  ದರ್ಶನ್ ಫೋಟ ಅಂಟಿಸಿದ್ದಾರೆ . ದರ್ಶನ್ ಮೊಬೈಲ್ ಹೇಮಂತ್ ಹೆಸರಿನಲ್ಲಿದೆ ಎಂದು ಸಿ.ವಿ ನಾಗೇಶ್ ಕೋರ್ಟ್ ಗೆ ತಿಳಿಸಿದರು.

Key words: Actor, Darshan, bail application, court