ಪೋಕ್ಸೋ ಕೇಸ್ ನಲ್ಲಿ ಸಿಕ್ಕಿಬಿದ್ದಿರುವ ಯಡಿಯೂರಪ್ಪ ಕೋರ್ಟ್ ಇಲ್ಲದಿದ್ದರೆ ಜೈಲಿನಲ್ಲಿ ಇರಬೇಕಿತ್ತು- ಸಿಎಂ ಸಿದ್ದರಾಮಯ್ಯ ಟಾಂಗ್

ಮೈಸೂರು,ಅಕ್ಟೋಬರ್,11,2024 (www.justkannada.in): ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಪತ್ರಿಕಾ ಜಾಹಿರಾತು ವಿಚಾರ ಕುರಿತು ಪ್ರತಿಕ್ರಿಯಿಸಿ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಪೋಕ್ಸೋ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲು ಅವರನ್ನು ಪಾರ್ಲಿಮೆಂಟ್ ಬೋರ್ಡ್ ನಿಂದ ಕಿತ್ತು ಹಾಕಲು ಹೇಳಿ. ಕೋರ್ಟ್ ಇಲ್ಲದಿದ್ದರೆ ಅವರು ಜೈಲಿನಲ್ಲಿ ಇರಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.

ಎಲ್ಲರಿಗೂ ದಸರಾ ಶುಭಾಶಯಗಳು ನಾಳೇ ನಡೆಯುವ  ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತೇನೆ. ಪುಷ್ಪಾರ್ಚನೆ ಮಾಡಲು ಹೆಚ್ಚು ಬಾರಿ ಅವಕಾಶ ಸಿಕ್ಕಿದೆ.  ನನಗೆ ಯಾವತ್ತು ದೇವರ ಆಶೀರ್ವಾದ ಇರುತ್ತೆ. ನನ್ನ ಮೇಲೆ ಚಾಮುಂಡೇಶ್ವರಿ ಅಶಿರ್ವಾದ ಸದಾ ಇರುತ್ತೆ. ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಇಷ್ಟೊಂದು ಬಾರಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದೆ. ಚಾಮುಂಡೇಶ್ವರಿ ಆಶಿರ್ವಾದ ಸದಾ ಇರುತ್ತೆ. ದೇವರ ಆಶಿರ್ವಾದ ಇಲ್ಲ ಅನ್ನುವುದೆ ಇಲ್ಲ. ದೇವರ ಆಶಿರ್ವಾದ ಇರುವುದರಿಂದಲ್ಲೆ ಇಷ್ಟು ವರ್ಷ ರಾಜಕೀಯದಲ್ಲಿ ಉಳಿದಿರುವುದು. ಹೊಗಳುವವರು ಇರುತ್ತಾರೆ. ತೆಗಳುವವರು ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಇಬ್ಬರು ಇರುತ್ತಾರೆ. ಪ್ರಜಾಪ್ರಭುತ್ವ ಆರೋಗ್ಯಕರ ಚರ್ಚೆ ಆಗಬೇಕು ಎಂದರು.

ದಸರಾ ಅಂದ್ರೆ ದುಷ್ಟ ಶಕ್ತಿಗಳ ಸಂಹಾರ. ಶಿಷ್ಟ ಜನರ ರಕ್ಷಣೆ ಅದೇ ದಸರಾ. ವಿಜಯನಗರದ ಅರಸರು ಜಯದ ಸಂಕೇತ ವಾಗಿ ಮಾಡಿದ್ರು . ಮೈಸೂರು ಅರಸರು ಅದನ್ನ ಮುಂದುವರೆಸಿದರು  ಇವತ್ತು ಅದೇ ಸಂಪ್ರದಾಯ ಮುಂದುವರೆದಿದೆ. ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತಿರಾ ಹಾಗೆ ಒಂದೊಮ್ಮೆ ನೀವುಗಳು ಕೂಡ ಪರವಾಗಿ, ವಿರೋಧವಾಗಿ ವ್ಯಾಖ್ಯಾನ ಮಾಡ್ತೀರಿ ಎಂದರು.

Key words: Yeddyurappa, POCSO case, jail, CM Siddaramaiah