ತನಿಖೆ ವೇಳೆ ಕೇಸ್ ವಾಪಸ್ ಅಕ್ಷಮ್ಯ ಅಪರಾಧ: ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ- ಬಿ.ವೈ ವಿಜಯೇಂದ್ರ

ದಕ್ಷಿಣ ಕನ್ನಡ, ಅಕ್ಟೋಬರ್,15,2024 (www.justkannada.in): ಸರ್ಕಾರ ದೇಶದ್ರೋಹಿಗಳ ಕೇಸ್ ಗಳನ್ನ ವಾಪಸ್ ಪಡೆದಿದೆ. ಭ್ರಷ್ಟ ಸರ್ಕಾರವನ್ನ ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.

ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆದ ವಿಚಾರ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಈ ಅಯೋಗ್ಯ ಸರ್ಕಾರದ ವಿರುದ್ದ ಹೋರಾಟ ಮುಂದುವರೆಯಲಿದೆ. ಗಣಪತಿ ವಿಸರ್ಜನೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಕಾಂಗ್ರೆಸ್ ಒಲೈಕೆಯಿಂದ ಈ ಘಟನೆ ನಡೆದಿದೆ. ಕ್ಯಾಬಿನೆಟ್ ನಲ್ಲಿ ದೇಶದ್ರೋಹಿಗಳ ಕೇಸ್ ಗಳನ್ನ ಹಿಂಪಡೆಯಲಾಗಿದೆ. ಎನ್ ಐ ಎ ಸೇರಿದಂತೆ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಹೀಗಿರುವಾಗ ಕೇಸ್ ಪಾಪಸ್ ಪಡೆದಿದ್ದು ಅಕ್ಷಮ್ಯ ಅಪರಾಧ ಇದು ಜನವಿರೋಧಿ ನೀತಿ. ಇಂಥ ಭ್ರಷ್ಟ ಸರ್ಕಾರದ ವಿರುದ್ದ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಸರ್ಕಾರ ವಜಾ ಮಾಡಲು ಮನವಿ ಮಾಡುತ್ತೇವೆ . ಜನವಿರೋಧಿ ಸರ್ಕಾರಕ್ಕೆ ಜನರು ಬುದ್ದಿ ಕಲಿಸಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ. ಪರಿಹಾರ ನಿರೀಕ್ಷೆ ಮಾಡದೇ ಸೈಟ್ ವಾಪಸ್ ನೀಡಿದ್ದಾರೆ. ಸಿದ್ದರಾಮಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Key words: hubli, Case, withdrawn, B.Y. Vijayendra