ಮೈಸೂರು,ಅಕ್ಟೋಬರ್,15,2024 (www.justkannada.in): ಕಲಾಭೂಮಿ ವತಿಯಿಂದ ಅಕ್ಟೋಬರ್ 20ರಂದು ಬೆಳಗ್ಗೆ 9:00 ರಿಂದ ರಾತ್ರಿ 9:00 ರವರಿಗೂ ಹೂಟಗಳ್ಳಿ ಬಿ ಎನ್ ರಾವ್ ಸಭಾಂಗಣದಲ್ಲಿ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಶಾಸಕ ಟಿ ಎಸ್ ಶ್ರೀವತ್ಸ ಅವರು ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನ ಒತ್ತಡ ಮತ್ತು ಕಲುಷಿತ ವಾತಾವರಣದ ಜೀವನದಲ್ಲಿ ಸಂಗೀತ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು. ಸಂಗೀತದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸಂಗೀತಕ್ಕೆ ಅಗಾಧ ಶಕ್ತಿಯಿದ್ದು, ಎಂಥವರನ್ನೂ ತಲೆದೂಗುವಂತೆ ಮಾಡುತ್ತದೆ. ಹೀಗಾಗಿ ಜುಗುಪ್ಸೆ ಎನಿಸಿದಾಗ ಸಂಗೀತ ಆಲಿಸುವ ಮೂಲಕ ಆರೋಗ್ಯ ಹೆಚ್ಚಿಸಿಕೊಳ್ಳಿ ಸಲಹೆ ನೀಡಿದರು.
ನಂತರ ಮಾತನಾಡಿದ ಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕ ಆಸ್ಕರ್ ಕೃಷ್ಣ , ಸ್ವರ ಸಂಭ್ರಮ ಕಾರ್ಯಕ್ರಮವು ಉದಯೋನ್ಮುಖ ಹಾಗೂ ಪರಿಣಿತ ಗಾಯಕ/ಗಾಯಕಿಯರಿಗೆ ಕನ್ನಡ ಚಿತ್ರರಂಗದ ಸಾಧಕರು, ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಹಾಡುವ ಅವಕಾಶ ಒದಗಿಸಿದ್ದು ಇದು ರಾಜ್ಯ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮವಾಗಿದೆ. ವೇದಿಕೆಯಲ್ಲಿ ಹಾಡು ಹೇಳಲು ಇಚ್ಛಿಸುವವರು 9206694999/8660073484 ನಂಬರಿಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಬಿ ನಿಂಗರಾಜ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರದೀಪ್ ಕುಮಾರ್, ಎಸ್ ಎನ್ ರಾಜೇಶ್, ಕಿಶೋರ್, ಕೀರ್ತಿ, ಹಾಗೂ ಇನ್ನಿತರರು ಹಾಜರಿದ್ದರು.
Key words: October 20, Swara Sambrama, Mysore, MLA Shrivatsa