ಇಡಿಗೆ ಭೈರತಿ ಸುರೇಶ್ ಕಚೇರಿ, ಮನೆ ಮೇಲೆ ದಾಳಿ ಮಾಡಿದ್ರೆ ಮಾತ್ರ ದಾಖಲಾತಿ ಸಿಗುತ್ತೆ- ಶಾಸಕ ಶ್ರೀವತ್ಸ

ಮೈಸೂರು,ಅಕ್ಟೋಬರ್,19,2024 (www.justkannada.in): ಮುಡಾದಲ್ಲಿ ಇಡಿ  ಅವರಿಗೆ ಬಾರೀ ದಾಖಲಾತಿ ಸಿಗಲ್ಲ. ಇಡಿ ಅವರಿಗೆ  ಸಚಿವ ಭೈರತಿ ಸುರೇಶ್ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದರೆ ಮಾತ್ರ ದಾಖಲಾತಿ ಸಿಗುತ್ತೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಶ್ರೀವತ್ಸ, ಲೋಕಾಯುಕ್ತ ತನಿಖೆ ಪ್ರಾಮಾಣಿಕವಾಗಿ ಆಗುತ್ತಿಲ್ಲ. ಲೋಕಾಯುಕ್ತರು ಸಿದ್ದರಾಮಯ್ಯ ಮತ್ತು ಪಾರ್ವತಿ ಅವರಿಗೆ ನೋಟಿಸ್ ಕೂಡ ಕೊಟ್ಟಿಲ್ಲ. ಒಟ್ಟು 4390 ಸೈಟ್ ನಲ್ಲಿ ಸಿದ್ದರಾಮಯ್ಯ ಅವರ 14 ಸೈಟ್ ವಾಪಸ್ ಬಂದಿದೆ. ಉಳಿದ ಸೈಟ್ ವಾಪಸ್ ಬರಬೇಕು. ಮುಡಾದಲ್ಲಿ ಇಡಿಗೆ ಬಾರೀ ದಾಖಲಾತಿ ಸಿಗಲ್ಲ. ಇಡಿ ಅವರಿಗೆ ಭೈರತಿ ಸುರೇಶ್ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದರೆ ಮಾತ್ರ ದಾಖಲಾತಿ ಸಿಗುತ್ತದೆ.  ಆದರೆ ಯಾವ ಫೈಲ್ ಮೈಸೂರಿನಿಂದ ಬೆಂಗಳೂರಿಗೆ ಹೋಗಿದೆ ಅಂತ ಖಚಿತವಾಗುತ್ತದೆ. ಈ ಮೂಲಕ ಬೆಂಗಳೂರಿನ ಭೈರತಿ ಸುರೇಶ್ ಮನೆ ಮತ್ತು ಕಚೇರಿ ಹುಡುಕಿದರೆ ಎಲ್ಲಾ ದಾಖಲಾತಿ ಸಿಗುತ್ತದೆ ಎಂದರು.

ಮುಡಾಗೆ ಶಾಸಕರು  ಸದಸ್ಯರು ಬೇಕಿಲ್ಲ. ಶಾಸಕರನ್ನು ಸರ್ಕಾರ ತೆಗೆದರೆ ಸ್ವಾಗತ. ಮಂಡ್ಯ ಸೇರಿದಂತೆ ಬೇರೆ ಇದ್ದರೂ ಅಡ್ರೆಸ್ ಬದಲಾವಣೆ ಮಾಡಿಕೊಂಡು ಇಲ್ಲಿ ಮುಡಾ ಸದಸ್ಯರಾಗಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಸೈಟ್ ಸಿಗಬೇಕು. ಇಷ್ಟೆಲ್ಲಾ ಹಗರಣಕ್ಕೆ ಕಾರಣರಾದ ಇಬ್ಬರು ಆಯುಕ್ತರು. ಆ ಇಬ್ಬರು ಆಯುಕ್ತರ ವಿರುದ್ಧ ಈ ತನಕವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲ್ಲ, ಬಂಧಿಸಿಲ್ಲ. ಜೊತೆಗೆ ಇಬ್ಬರ ವಿರುದ್ಧ ಯಾವುದೇ ಕ್ರಮವಾಗದೆ ಸೇಫ್ ಆಗಿದ್ದಾರೆ ಎಂದು ಶ್ರೀವತ್ಸ ಕಿಡಿಕಾರಿದರು.

ಇಡಿ ತನಿಖೆ ಜೊತೆಗೆ ಸಿಬಿಐ ಆಗಲಿ- ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ

ಮುಡಾ ಹಗರಣ ಕುರಿತು ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ ಮಾತನಾಡಿ,  ಶೇಕಡಾ 50:50 ಅನುಪಾತದ ಬಗ್ಗೆ ನಗರಾಭಿವೃದ್ಧಿ ಕಾರ್ಯದರ್ಶಿ ಪತ್ರ ಬರೆದರೂ ಕೇರ್ ಮಾಡದೆ ನಿವೇಶನ ಹಂಚಿಕೆ ಮಾಡಿದ್ದಾರೆ. ಆದರೆ ಇದಕ್ಕೆ ಕಾರಣರಾದ ಇಬ್ಬರು ಆಯುಕ್ತರನ್ನು ಸೇಫ್ ಮಾಡಲಾಗುತ್ತಿದೆ. ಇಬ್ಬರನ್ನು ವಿಚಾರಣೆ ಮಾಡಿದರೆ ಬಹಳಷ್ಟು ಮಾಹಿತಿ ಸಿಗುತ್ತದೆ. ಇಡಿ ತನಿಖೆ ಮಾಡಿದರೆ ಇವರಿಗೆ ಏನು ತೊಂದರೆ? ಎಂದು ಪ್ರಶ್ನಿಸಿದರು.

ತಪ್ಪು ಮಾಡಿರುವ ಕಾರಣ ಇಡಿ, ಸಿಬಿಐ ತನಿಖೆ ಬೇಡವೆಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ತನಿಖೆ ಮಾಡಲ್ಲ. ಆದ ಕಾರಣ ಈಗ ಇಡಿ ತನಿಖೆ ಜೊತೆಗೆ ಸಿಬಿಐ ಆಗಲಿ ಎಂದು ನಾಗೇಂದ್ರ ಆಗ್ರಹಿಸಿದರು.

Key words: ED, raids, Bhairati Suresh,  office, house, MLA Srivatsa