ಡಿಕೆ ಸುರೇಶ್ ಸ್ಪರ್ಧೆಗೆ ಒತ್ತಡ: ಸಿಪಿವೈ ಸೆಳೆಯಲು ಯತ್ನಿಸಿಲ್ಲ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಅಕ್ಟೋಬರ್,21,2024 (www.justkannada.in): ಭಾರಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿರುವ  ಕೃಷಿ ಸಚಿವ ಚಲುವರಾಸ್ವಾಮಿ , ರಾಮನಗರದವರೇ ಚನ್ನಪಟ್ಟಣ ಅಭ್ಯರ್ಥಿ ಆಗುತ್ತಾರೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸಿಪಿ ಯೋಗೇಶ್ವರ್ ಸೆಳೆಯಲು ನಾವು ಯತ್ನಿಸಿಲ್ಲ. ಯೋಗೇಶ್ವರ್ ಜೊತೆ ನಾವು ಮಾತನಾಡಿಲ್ಲ. ಚನ್ನಪಟ್ಟಣದಲ್ಲಿ ಡಿಕೆ ಸುರೇಶ್  ಸ್ಪರ್ಧೆಗೆ ಒತ್ತಡ ಇದೆ. ಸಿಎಂ ಸಿದ್ದರಾಮಯ್ಯ  ಡಿಸಿಎಂ ಡಿಸಿಎಂ ಡಿಕೆ ಶಿವಕುಮಾರ್  ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಚನ್ನಪಟ್ಟಣವನ್ನ ಜೆಡಿಎಸ್  ಕ್ಷೇತ್ರ ಎಂದು ಬಿಜೆಪಿ ಕೈತೊಳೆದುಕೊಂಡಿದೆ. ಜೆಡಿಎಸ್ ಚಿಹ್ನೆಯಡಿ ಸಿಪಿ ಯೋಗೇಶ್ವರ್ ಸ್ಪರ್ಧೆಗೆ ಒತ್ತಡ ಇದೆ. ಜೆಡಿಎಸ್ ಚಿಹ್ನೆಯಡಿ ಯೋಗೇಶ್ವರ್ ಒಪ್ಪಬಹುದು. ಅನಿತಾ ಕುಮಾರಸ್ವಾಮಿ, ನಿಖಿಲ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

Key words: Channapatna, DK Suresh, CP Yogeshwar, Minister, Chaluvarayaswamy