ಮೈಸೂರು, ಅ.25,2024: (www.justkannada.in news) ಕಾನೂನು ಸಮಸ್ಯೆಗಳನ್ನು ತಪ್ಪಿಸಲು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಯಂಪ್ರೇರಣೆಯಿಂದ ಪಾರ್ವತಿ ( ಸಿಎಂ ಸಿದ್ದರಾಮಯ್ಯ ಪತ್ನಿ) ಅವರಿಗೆ 14 ಸೈಟ್‌ಗಳನ್ನು ಪರಿಹಾರವಾಗಿ ಸ್ವೀಕರಿಸಲು ಮನವರಿಕೆ ಮಾಡಿತು ಎಂದು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿದ್ದಾರೆ.
“ಜಸ್ಟ್ ಕನ್ನಡ “ ಆನ್‌ಲೈನ್ ನ್ಯೂಸ್ ಪೋರ್ಟಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮುಡಾ ಮಾಜಿ ಕಮಿಷನರ್ ಮತ್ತು ರೈಲ್ ಇನ್‌ಫ್ರಾಸ್ಟ್ ರಕ್ಚರ್ ಡೆವಲಪ್‌ಮೆಂಟ್ (ಕರ್ನಾಟಕ) ಲಿಮಿಟೆಡ್‌ನ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಪ್ರಸ್ತುತ ಉಪ ಆಯುಕ್ತ ಡಿ.ಬಿ.ನಟೇಶ್, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಪರಿಹಾರ ರೂಪದಲ್ಲಿ ೧೪ ನಿವೇಶನಗಳನ್ನು ನೀಡಿರುವ ಪ್ರಾಧಿಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಮುಂದುವರೆದು ನಟೇಶ್ ಹೇಳಿದಿಷ್ಟು…
ಇಲ್ಲವಾದಲ್ಲಿ ಆಸ್ತಿ ಮಾಲೀಕರಾದ ಪಾರ್ವತಿ ಅವರು ನ್ಯಾಯಾಲಯದ ಮೊರೆ ಹೋಗಿದ್ದ ವೇಳೆ ಮುಡಾಕ್ಕೆ ಅಪಾರ ನಷ್ಟ ಉಂಟಾಗುತ್ತಿತ್ತು ಎಂದರು. 2017ರಲ್ಲಿ ಇದೇ ಪ್ರಕರಣದಲ್ಲಿ ಶ್ರೀರಾಂಪುರದಲ್ಲಿ 2.17 ಎ/ಜಿ ಹೊಂದಿದ್ದ ಸುಂದರಮ್ಮ ತಮ್ಮ ಜಮೀನು ವಾಪಸ್ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಬಡಾವಣೆಯಂತೆ ಜಮೀನು ಅಭಿವೃದ್ಧಿ ಪಡಿಸಿ ರಸ್ತೆ ಕಾಮಗಾರಿ ಮುಗಿಸಿ, ಯುಜಿಡಿ ಪೈಪ್ ಹಾಕಿ, ಚರಂಡಿ ಕಾಮಗಾರಿ ನಡೆದಿದೆ. 16 ನಿವೇಶನಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಅಭಿವೃದ್ಧಿ ಪಡಿಸಿದ ಭೂಮಿಯನ್ನು ಸುಂದರಮ್ಮ ಅವರಿಗೆ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶ ನೀಡಿದಾಗ ಮುಡಾಕ್ಕೆ ಹೊಡೆತ ಬಿದ್ದಿತ್ತು. ಅಲ್ಲದೆ, ಪ್ರಕರಣದಲ್ಲಿ ಕೆಲ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ ಎಂದರು.
ಅಂತಹ ಕಾನೂನು ಪ್ರಕರಣವನ್ನು ತಪ್ಪಿಸಲು ಮತ್ತು ಪ್ರಾಧಿಕಾರಕ್ಕೆ ಯಾವುದೇ ನಷ್ಟವನ್ನು ತಡೆಗಟ್ಟಲು ಪಾರ್ವತಿ ಸಿದ್ದರಾಮಯ್ಯ ಅವರ ವಿಷಯವನ್ನು ಸಮರ್ಥವಾಗಿ ಇತ್ಯರ್ಥಗೊಳಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-2013ರ ಅಡಿಯಲ್ಲಿ ಬಿಡಿಎ ಸಾವಿರಾರು ಎಕರೆ ಭೂಮಿಗೆ ಪರಿಹಾರವನ್ನು ಸಹ ನೀಡಿದ್ದು, ನಗದು ಮೂಲಕ ಅಥವಾ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಪರಿಹಾರವನ್ನು ನೀಡಬಹುದು ಎಂದು ನಟೇಶ್ ತಿಳಿಸಿದರು.
2017ರ ಡಿಸೆಂಬರ್‌ನಲ್ಲಿ ಕೆಸರೆ ಸರ್ವೆ ಸಂಖ್ಯೆ 464ರಲ್ಲಿ ಅಭಿವೃದ್ಧಿ ಪಡಿಸಿದ 3-16 ಎಕರೆಗೆ ಪರ್ಯಾಯವಾಗಿ ಅಭಿವೃದ್ಧಿಯಾಗದ ಭೂಮಿ ನೀಡಲು ಪ್ರಾಧಿಕಾರ ನಿರ್ಧರಿಸಿತು. ಹೊಸ ಭೂ ಸ್ವಾಧೀನ ಕಾಯ್ದೆ ಅನ್ವಯ ಮಾರುಕಟ್ಟೆ ದರ ೧೧೦ ಕೋಟಿ ರೂ.ಗಳು . ಈ ಪೈಕಿ ಶೇ ೫೦ ರಷ್ಟು ಲೆಕ್ಕ ಹಾಕಿದರೆ ೬೦ ಕೋಟಿ ರೂ. ಕೊಡಲೇಬೇಕಾಗಿತ್ತು. ಇದು ಪ್ರಾಧಿಕಾರಕ್ಕೆ ಆರ್ಥಿಕ ಹೊರೆಯಾಗುತ್ತಿತ್ತು. ಈ ಕಾರಣದಿಂದ ಭೂ ಮಾಲೀಕರಾದ ಪಾರ್ವತಿ ಅವರಿಗೆ 50:50 ಭೂ ಪರಿಹಾರ ನೀಡುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲು ಮನವೊಲಿಸಲಾಯಿತು. ಅದರಂತೆ ವಿಜಯನಗರದಲ್ಲಿ ಸೈಟ್‌ಗಳನ್ನು ನೀಡಲಾಯಿತು.
key words: Mysore Urban Development Authority, convinced Parvathy, CM Siddaramaiah , accept 14 sites, as compensation, former MUDA Commissioner, DB Natesh
SUMMARY:
To avoid legal issues, the Mysore Urban Development Authority voluntarily convinced Parvathy (CM Siddaramaiah’s wife) to accept 14 sites as compensation, former MUDA Commissioner DB Natesh said.