ಮಹಿಳಾ ಪತ್ರಕರ್ತರಿಗೆ ಆರ್ಥಿಕ ಸಾಕ್ಷರತೆ ಕುರಿತು ಕಾರ್ಯಾಗಾರ

Workshop on Financial Literacy for Women Journalists. Gunjan Krishna, Development Commissioner and Director, Industries and Commerce Department, will be the chief guest to media ally on financial literacy and shed light on the topic.

 

ಬೆಂಗಳೂರು, ಅ.25,2024: (www.justkannada.in news) ಪ್ರೆಸ್ ಕ್ಲಬ್ ಬೆಂಗಳೂರಿನಲ್ಲಿ ಮಹಿಳಾ ಸಮಿತಿಯು ಮಹಿಳಾ ಪತ್ರಕರ್ತರಿಗೆ ಆರ್ಥಿಕ ಸಾಕ್ಷರತೆಯ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ.

ಪ್ರೆಸ್ ಕ್ಲಬ್ ನಲ್ಲಿ ಇದು ಪ್ರಪ್ರಥಮ ಮತ್ತು ವಿನೂತನ ಕಾರ್ಯಾಗಾರವಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ 2024ರ  ಅಕ್ಟೋಬರ್ 26 ರಂದು ಶನಿವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆವರೆಗೆ ಕಾರ್ಯಾಗಾರ ಆಯೋಜಿಸಲಾಗಿದೆ.

ಆರ್ಥಿಕ ಸಾಕ್ಷರತೆ ಕುರಿತು ಮಾಧ್ಯಮ ಮಿತ್ರರಿಗೆ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಗುಂಜನ್ ಕೃಷ್ಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಷಯದ ಕುರಿತು ಬೆಳಕು ಚೆಲ್ಲಲಿದ್ದಾರೆ. ಅರ್ಧ ದಿನದ ಕಾರ್ಯಾಗಾರದಲ್ಲಿ ವೈಯಕ್ತಿಕ ಹಣಕಾಸು ಮತ್ತು ಹಣದ ನಿರ್ವಹಣೆಗೆ ಅಗತ್ಯವಾದ ನಿರ್ದಿಷ್ಟ ಅಂಶಗಳ ಕುರಿತು ಗುಂಜನ್ ಕೃಷ್ಣ ಅವರು ಮಾಹಿತಿ ನೀಡಲಿದ್ದಾರೆ.

ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಮಹಿಳೆಯರಿಗೆ ಅನುಕೂಲವಾಗುವಂತೆ ಕಾರ್ಯಾಗಾರ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರು ಮತ್ತು ಇತರರ ಆರ್ಥಿಕ ಸಬಲೀಕರಣಕ್ಕೆ ಆರ್ಥಿಕ ಸಾಕ್ಷರತೆಯು ನಿರ್ಣಾಯಕವಾಗಿದೆ. ಈ ಕಾರ್ಯಾಗಾರವು ಮಹಿಳೆಯರ ಹಣಕಾಸು ನಿರ್ವಹಣೆಯ ಕೌಶಲ್ಯಗಳನ್ನು ಹೆಚ್ಚಿಸಲು ನೆರವಾಗಿದೆ. ಮಹಿಳೆಯರಷ್ಟೇ ಅಲ್ಲದೇ ಆಸಕ್ತಿ ಹೊಂದಿರುವ ಎಲ್ಲರೂ ಭಾಗವಹಿಸಬೇಕು. ಹಣಕಾಸು ಕೌಶಲ್ಯ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಕಾರ್ಯಾಗಾರ ಸಹಕಾರಿಯಾಗಲಿದೆ.

ಪತ್ರಕರ್ತ ಮತ್ತು ಹಣಕಾಸು ವಿಶ್ಲೇಷಕರಾದ ಶರತ್ ಎಂ.ಎಸ್ ಅವರು ಪಾಲ್ಗೊಂಡು ಆರ್ಥಿಕ ಸಾಕ್ಷರತೆ ಬಗೆಗೆ ಬೆಳಕು ಚೆಲ್ಲುವರು.

key words: Workshop, Financial Literacy, for Women Journalists, press club of Bangalore

SUMMARY:

Workshop on Financial Literacy for Women Journalists. Gunjan Krishna, Development Commissioner and Director, Industries and Commerce Department, will be the chief guest to media ally on financial literacy and shed light on the topic.