ಬೆಂಗಳೂರು,ಅಕ್ಟೋಬರ್,28,2024 (www.justkannada.in): ದಲಿತ ಒಳ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ದಲಿತ ಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ದಲಿತ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಕಮಿಟಿ ರಚನೆ ಮಾಡಲಾಗುತ್ತದೆ . ಡಾಟಾ ಪಡೆದು ಸಮಗ್ರವಾಗಿ ಪರಿಶೀಲಿಸಿ ಮೂರು ತಿಂಗಳೊಳಗೆ ವರದಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ. ಅಲ್ಲಿವರೆ ನೇಮಕಾತಿ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದ್ದು, ಯಾವುದೇ ನೇಮಕಾತಿ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಣಯಗಳು ಈ ಕೆಳಕಂಡಂತಿದೆ.
ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆಗೆ ಅನುಮೋದನೆ, ಬೀಜೋತ್ಪಾದನಾ ಕೇಂದ್ರಗಳು,ರೈತ ಸಂಪರ್ಕ ಕೇಂದ್ರ, ಕೃಷಿ ಯಂತ್ರ ಕೇಂದ್ರ,ಜೈವಿಕ ನಿಯಂತ್ರಣ ಪ್ರಯೋಗಾಲಯ ಇದೆಲ್ಲವುಗಳನ್ನೂ ಒಂದೇ ಕಡೆ ತರುವ ನಿರ್ಧಾರ ಮಾಡಲಾಗಿದ್ದು ಹಾಗಾಗಿ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ ಮಾಡಲಾಗುತ್ತದೆ ಎಂದು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.
ಮಾರುತಿ ಪ್ರಸನ್ನ ಮೇಲಿನ ತನಿಖೆ ಶಿಫಾರಸು ವಾಪಸ್, ಲೋಕಾಯುಕ್ತ ತನಿಖೆ ಶಿಫಾರಸು ವಾಪಸ್ ಪಡೆಯಲು ಸಭೆಯಲ್ಲಿ ಒಪ್ಪಲಾಗಿದೆ. ಹಾಗೆಯೇ ಕರ್ನಾಟಕ ಸರುಕು,ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ, ವಿವಾದಿತ ತೆರಿಗೆ ಮಿತಿಯನ್ನ ತರಲು ಅನುಕೂಲ. 40 ಕೋಟಿಗೆ ರಿಸ್ಟ್ರಿಕ್ಟ್ ಮಾಡಲು ಒಪ್ಪಿಗೆ, ಜಿಎಸ್ ಟಿ ಮೇಲ್ಮನವಿ ಹಕ್ಕು ಸ್ಥಾಪನೆಗೆ ಅವಕಾಶ ನೀಡಲಾಗುತ್ತದೆ . ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 7045 ವೈದ್ಯಾಧಿಕಾರಿಗಳ ನೇಮಕ ಮುಂದುವರಿಕೆ ಸಮ್ಮತಿಸಲಾಗಿದೆ ಎಂದರು.
3.16 ಎಕರೆ ಪ್ರದೇಶದಲ್ಲಿ ಮಿಲಿಟರಿ ಸೆಂಟ್ರಲ್ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣ, 102.80 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಐಜಿ ಆಫೀಸ್ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. 127 ಕೋಟಿ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತದೆ. ಪರಿಹಾರ ಬಾರದಿದ್ದರೆ ಅದನ್ನ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ಮಾಲೂರು ಹೊಸಕೋಟೆ ಹೈಬ್ರಿಡ್ ರಸ್ತೆ ನಿರ್ಮಾಣಕ್ಕೆ 3190 ಕೋಟಿಗಳ ವೆಚ್ಚಕ್ಕೆ ಸಂಪುಟ ಸಮ್ಮತಿ ಸೂಚಿಸಲಾಗಿದೆ. ದೇವನಹಳ್ಳಿ ಏರ್ಪೋರ್ಟ್ ಗೆ ಕನೆಕ್ಟ್ ಮಾಡುವ ರಸ್ತೆ. ನ್ಯಾಷನಲ್ ಹೈವೇ ಮಾದರಿಯಲ್ಲಿ ಹೆದ್ದಾರಿ ನಿರ್ಮಾಣ. 100 ಕಿಮೀ ದೂರದವರೆಗೆ ಹೈಬ್ರಿಡ್ ರಸ್ತೆ, ಪಿಪಿಪಿ ಮಾಡೆಲ್ ನಡಿ ಕಾರಿಡಾರ್ ನಡುವೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 33 ಮಂದಿ ವೃತ್ತಿ ಶಿಕ್ಷಕರಿಗೆ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೆಚ್.ಕೆ ಪಾಟೀಲ್ ಹೇಳಿದರು.
ನೂತನ ಪ್ರವಾಸೋಧ್ಯಮ ನೀತಿಗೆ ಒಪ್ಪಿಗೆ
ನೂತನ ಪ್ರವಾಸೋಧ್ಯಮ ನೀತಿಗೆ ಒಪ್ಪಿಗೆ ನೀಡಲಾಗಿದೆ. ಸಾಹಸ , ಕೃಷಿ,ಕರಾವಳಿ, ಬೀಚ್ ಪ್ರವಾಸೋಧ್ಯಮ, ಪಾರಂಪರಿಕ, ಪರಿಸರ, ಶೈಕ್ಷಣಿಕ ಪ್ರವಾಸೋದ್ಯಮ. ಒಳನಾಡು, ಸಾಹಿತ್ಯ,ಕಡಲು,ವೈದ್ಯಕಿಯ ಪ್ರವಾಸೋದ್ಯಮ, ಗಣಿಗಾರಿಕೆ,ರಾಜಕೀಯ,ಆಧ್ಯಾತ್ಮ,ಧಾರ್ಮಿಕ ಪ್ರವಾಸೋಧ್ಯಮ ಬುಡಕಟ್ಟು,ವಿವಾಹ ಪ್ರವಾಸೋಧ್ಯಮಗಳು ಬರಲಿವೆ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದ ಬಗ್ಗೆ ಚರ್ಚೆಯಾಗಿದೆ. ದಿನಾಂಕ ನಿರ್ಣಯ ಸಿಎಂ ವ್ಯಾಪ್ತಿಗೆ ಬಿಡಲಾಗಿದೆ. ಡಿಸೆಂಬರ್2 ಇಲ್ಲವೇ 3 ನೇ ವಾರ ಬರಲಿದೆ. ಕಾಂಗ್ರೆಸ್ ಎಐಸಿಸಿ ಅಧಿವೇಶನ ಇದೆ. ಅದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಯ ಹೊಂದಾಣಿಕೆ. ಸಿಎಂ ಅಂತಿಮ ನಿರ್ಣಯ ಮಾಡ್ತಾರೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.
ನಮ್ಮಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನ ಜಾರಿಗೆ ತರಲು ರೆಡಿಯಿದೆ-ಸಚಿವ ಹೆಚ್.ಸಿ.ಮಹದೇವಪ್ಪ
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಸದಾಶಿವ ಆಯೋಗದ ವರದಿ ಹಿಂದೆ ಬಿಜೆಪಿ ಸರ್ಕಾರವೇ ತಿರಸ್ಕರಿಸಿತ್ತು. ಮಾಧುಸ್ವಾಮಿ ನೇತೃತ್ವದ ಕಮಿಟಿ ರಚಿಸಿತ್ತು. ವರದಿಯಲ್ಲಿನ ಹಲವು ಅಂಶಗಳನ್ನ ಬಿಟ್ಟಿದ್ದರು. ಹಾಗಾಗಿ ನಾವು ವರದಿ ಜಾರಿಗೆ ಹೊರಟಿದ್ದೇವೆ. ದಲಿತ ಒಳ ಪಂಗಡಗಳು ಚರ್ಚೆ ಮಾಡಿದ್ದೆವು. ದಲಿತ ಒಳ ಪಂಗಡಗಳು ಒಳಮೀಸಲಾತಿಗೆ ಬದ್ದರಿದ್ದಾರೆ. ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗಿದೆ. ಕಮಿಟಿಗೆ ಎಂಪರಿಕಲ್ ಡಾಟಾ ಸಂಗ್ರಹಿಸಿ ಕೊಡುವಂತೆ ಸೂಚಿಸಿದ್ದೇವೆ. ಕಮಿಟಿ ಇದೆಲ್ಲವನ್ನೂ ನೋಡಲಿದೆ. ಕೇಂದ್ರದ ಜನಗಣತಿಯೂ ಆಗಬೇಕಿದೆ. ದತ್ತಾಂಶ ಕ್ರೋಡೀಕರಿಸಿ ತೀರ್ಮಾನ ಮಾಡಲಾಗುತ್ತದೆ. ನಮ್ಮಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು ಒಳಮೀಸಲಾತಿಯನ್ನ ತರಲು ರೆಡಿಯಿದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು
33 ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ450 ಹುದ್ದೆಗಳ ನೇಮಕಕ್ಕೆ ಮಂಜೂರಾತಿ ನೀಡಲಾಗಿದೆ. ದೌರ್ಜನ್ಯ ಪ್ರಕರಣಗಳ ತುರ್ತು ವಿಲೇವಾರಿಗಾಗಿ ಠಾಣೆಗಳ ಸ್ಥಾಪನೆ ಮಾಲಾಗತ್ತದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಸ್ಥಾಪನೆ ಮಾಡಲಾಗುತ್ತದೆ. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಒತ್ತು. ಇದು ದೇಶದಲ್ಲೇ ಮೊದಲ ಯೋಜನೆಯಾಗಿದೆ. ಪರಿಶಿಷ್ಟರ ಮೇಲೆ ದೌರ್ಜನ್ಯವಾದಾಗ ದೂರು ದಾಖಲು ಮಾಡಲಾಗುತ್ತದೆ. ಸ್ಥಳೀಯ ಠಾಣೆಗಳಲ್ಲಿ ದೂರು ಸಲ್ಲಿಸಬೇಕುಅಲ್ಲಿಂದ ಈ ವಿಶೇಷ ಠಾಣೆಗೆ ವರ್ಗಾವಣೆಯಾಗುತ್ತದೆ. ಕೂಡಲೇ ಎಫ್ ಐಆರ್ ದಾಖಲಿಸಲು ಅವಕಾಶ ಎಂದು ತಿಳಿಸಿದರು
Key words: Cabinet, meeting, Dalit reservation, minister, HK Patil