ಬೆಂಗಳೂರು, ಅಕ್ಟೋಬರ್,30,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದ್ದು ಈ ನಡುವೆ ಹೈಕೋರ್ಟ್ ಕೆಲ ಕಠಿಣ ಷರತ್ತುಗಳನ್ನು ವಿಧಿಸಿದೆ.
ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಇಂದೇ ನಟ ದರ್ಶನ್ ಗೆ ನಟ ದರ್ಶನ್ ಬಿಡುಗಡೆಯಾಗುವ ಸಾಧ್ಯತೆ. ಹಾಗೆಯೇ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ನಟ ದರ್ಶನ್ ಕಠಿಣ ಷರತ್ತುಗಳನ್ನ ವಿಧಿಸಿದ್ದು ಅವುಗಳು ಹೀಗಿವೆ..
2 ಲಕ್ಷ ರೂಪಾಯಿ ಬಾಂಡ್ ಶ್ಯೂರಿಟಿ ನೀಡಬೇಕು
ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ. ಬೆಂಗಳೂರಿನಲ್ಲೇ ಮಾತ್ರ ಚಿಕಿತ್ಸೆ ಪಡೆಯಬೇಕು
ಮಾಧ್ಯಮಗಳಗೂ ಹೇಳಿಕೆ ನೀಡಬಾರದು. ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಬಾರದು. ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿಕೆ ನೀಡಬಾರದು.
ಜಾಮೀನು ಅವಧಿ ಮುಕ್ತಾಯವಾದ ಬಳಿಕ ತಕ್ಷಣ ಹಾಜರಾಗಬೇಕು
ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಸಾಕ್ಷ್ಯಗಳನ್ನು ಸಂಪರ್ಕಿಸಬಾರದು ಸಾಕ್ಷಿ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಹಾಕಬಾರದು.
ಜಾಮೀನು ದುರುಪಯೋಗ ಪಡಿಸಿಕೊಳ್ಳಬಾರದು. ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು
ಒಂದು ವಾರದಲ್ಲಿ ಚಿಕಿತ್ಸೆ ವಿವರ ಕೋರ್ಟ್ ಗೆ ಸಲ್ಲಿಸಬೇಕು.
Key words: High court, strict conditions, actor, Darshan, Bail