ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: ಟಿಕೆಟ್, ವಿಐಪಿ ಪಾಸ್, ವಿಶೇಷ ಬಸ್ ರದ್ದು

ಹಾಸನ, ಅಕ್ಟೋಬರ್ 31,2024 (www.justkannada.in): ಈ ಬಾರಿ ಹಾಸನದ ಹಾಸನಾಂಬ ದೇಗುಲದಲ್ಲಿ ದೇವಿಯ ದರ್ಶನಕ್ಕೆ 24 ಗಂಟೆ ಅವಕಾಶ ಕಲ್ಪಿಸಲಾಗಿದ್ದು ಹಾಸನಾಂಬೆ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬರುತ್ತಿದೆ. ಭಕ್ತರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಇಂದು ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ 1000 ರೂ. ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬೆಂಗಳೂರು ಸೇರಿ ವಿವಿಧೆಡೆಯಿಂದ ಬಿಟ್ಟಿದ್ದ 500  ವಿಶೇಷ ಬಸ್​ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಸನದ ಹಾಸನಾಂಬೆ ದೇವಿ ದರ್ಶನದ ಎಲ್ಲ ವಿಐಪಿ ಪಾಸ್​ಗಳನ್ನು ಹಾಸನಾಂಬೆ ದೇಗುಲ ಆಡಳಿತ ಮಂಡಳಿ ರದ್ದುಗೊಳಿಸಿದೆ. ಈಗಾಗಲೇ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರನ್ನು ಹೊರತುಪಡಿಸಿ ಉಳಿದವರಿಗೆ ವಿಐಪಿ ಪಾಸ್ ಮೂಲಕ ಒಳಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

Key words: Hasanambe temple, devotees, VIP pass, special bus, cancelled