ವಕ್ಫ್ ಆಸ್ತಿ ವಿವಾದ: ಪ್ರಧಾನಿ ಮೋದಿಗೆ ಪತ್ರ ಬರೆದ ಶಾಸಕ ಯತ್ನಾಳ್

ಬೆಂಗಳೂರು, ನವೆಂಬರ್,1,2024 (www.justkannada.in): ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸಾಕಷ್ಟು ಸದ್ಧು ಮಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಶಾಸಕ ಯತ್ನಾಳ್, ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ಸಮಾಜ ಸೇವೆಗೆ ಬಳಸಲು ತುರ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ವಕ್ಫ್  ಬೋರ್ಡ್‌ನಿಂದಾಗಿ ಜಮೀನು ಮಾಲೀಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲೀಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ. ವಕ್ಫ್  ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಕ್ಫ್ ಮಂಡಳಿಯ ಗುರಿ ಕೇವಲ ರೈತರಲ್ಲ, ವಕ್ಫ್  ಆಸ್ತಿ ಎಂದು ಘೋಷಿಸಲ್ಪಟ್ಟ ಅನೇಕ ದೇವಾಲಯಗಳು ಮತ್ತು ಮಠಗಳ ಆಸ್ತಿಗಳನ್ನು ಸಹ ಗಮನಿಸುವುದು ಮುಖ್ಯ.  ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ಸಮಾಜ ಸೇವೆಗೆ ಬಳಸಲು ತುರ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.

Key words: Waqf property, dispute, MLA, Yatnal, letter, PM Modi