ರೈತರಿಗೆ ವಕ್ಫ್ ಬೊರ್ಡ್ ನೀಡಿರುವ ನೋಟಿಸ್ ಹಿಂಪಡೆಯುವಂತೆ ಡಿಸಿಗಳಿಗೆ ಸಿಎಂ ಸೂಚನೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ನವೆಂಬರ್,2,2024 (www.justkannada.in):   ರಾಜ್ಯದ ವಕ್ಫ್ ಆಸ್ತಿ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರೈತರಿಗೆ ವಕ್ಫ್ ಬೊರ್ಡ್ ನೀಡಿರುವ ನೋಟಿಸ್ ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರೈತರಿಗೆ ನೀಡಲಾಗಿರುವ ನೋಟಿಸ್ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.  ರೈತರಿಗೆ ನೀಡಲಾಗಿರುವ ನೋಟಿಸ್ ವಾಪಾಸ್ ಪಡೆಯಲಾಗುವುದು. ಕಂದಾಯ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಭೂ ವಿವಾದ ಬಗೆಹರಿಸಲಾಗುವುದು ಎಂದು ನುಡಿದರು.

ಈ ಮೂಲಕ ವಿವಾದ ಇಲ್ಲಿಗೆ ಮುಗಿದಿದೆ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ಆಗುತ್ತೆ. ವಕ್ಫ್ ದಾಖಲಾತಿಯಲ್ಲೊಂದೇ ಇದ್ದರೆ ಯಾವುದೇ ಸಮಸ್ಯೆ ಆಗಲ್ಲ ಎಂದು ಪರಮೇಶ್ವರ್  ತಿಳಿಸಿದರು.

Key words: CM,  instructs, DCs, withdraw, notice, farmers , Dr. G. Parameshwar