ಮೈಸೂರು, ನವೆಂಬರ್,5,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ.6 ರಂದು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದು ನಾಳೆ ಸಿಎಂ ವಿಚಾರಣೆಗೆ ಹಾಜರಾಗಬೇಕಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯಗೆ ಎದುರಾಗಿರುವ ಸಂಕಷ್ಟ ದೂರಾಗಲಿ ಎಂದು ಅಭಿಮಾನಿಗಳು ಬರಿಗಾಲಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ ಹರಕೆ ಹೊತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಹಿನ್ನೆಲೆ ಸಿದ್ದರಾಮಯ್ಯ ಅವರಿಗೆ ಎದುರಾಗಿರುವ ಸಂಕಷ್ಟ ದೂರವಾಗಲಿ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದ ಅಭಿಮಾನಿಗಳು ಬರಿಗಾಲಲ್ಲೇ ಚಾಮುಂಡಿ ಬೆಟ್ಟ ಹತ್ತಿದರು. ನಂತರ 101 ತೆಂಗಿನಕಾಯಿ ಹೊಡೆದು ಲೋಕೇಶ್ ಅವರು ಹರಕೆ ಕಟ್ಟಿಕೊಂಡರು.
ಸಿಎಂ ಸಿದ್ದರಾಮಯ್ಯಗೆ ಒಳಿತಷ್ಟೇ ಅಲ್ಲ ವಿರೋಧಿಗಳು ನಾಶವಾಗಲಿ ಎಂದು ಪೂಜೆ ಸಲ್ಲಿಸಿದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನ ಸಿಲುಕಿಸಲಾಗಿದೆ. ಮಾಜಿ ಆಯುಕ್ತ ನಟೇಶ್ ಅವರೇ ಸತ್ಯ ಹೇಳಿದ್ದಾರೆ. ಕಪ್ಪುಚುಕ್ಕೆ ಇಲ್ಲದ ಸಿಎಂಗೆ ಕಪ್ಪುಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.
Key words: CM Siddaramaiah, mysore, fans, Chamundi hills