ಮೈಸೂರು,ನವೆಂಬರ್,6,2024 (www.justkannada.in): ನವದೆಹಲಿಯ ರಾಷ್ಟ್ರೀಯ ನಕಲು ವಿರೋಧಿ ಬ್ಯೂರೋ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಆರ್ಟ್ ಅಂಡ್ ಮೈಂಡ್ ಫೆಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನವೆಂಬರ್ 7 ರಂದು(ನಾಳೆ) ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಆರ್ಟ್ ಅಂಡ್ ಮೈಂಡ್ ಫೆಸ್ಟ್ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಬೆಂಗಳೂರಿನ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಮ್ಯಾನೇಜ್ ಮೆಂಟ್ ಮತ್ತು ಎಂಟರ್‌ಪ್ರೆನರ್ಶಿಪ್-ಬಿಸಿನೆಸ್ ಸ್ಕೂಲ್ ನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ.ಕೆ.ಅಪರ್ಣಾ ರಾವ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ ವಿ. ಬೈರಿ ಉದ್ಘಾಟಿಸುವರು. ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಲಿದ್ದಾರೆ .ಕರಾಮುವಿ ಕುಲಸಚಿವರಾದ ಪ್ರೊ. ಕೆ.ಬಿ ಪ್ರವೀಣ ಹಾಗೂ ಅಕಾಡೆಮಿಕ್ ಡೀನ್ ಡಾ.ಎನ್. ಲಕ್ಷ್ಮಿ ಉಪಸ್ಥಿತರಿರುವರು.
ವಿವಿಧ ಸ್ಪರ್ಧೆಗಳ ಆಯೋಜನೆ..
ಕಾರ್ಯಕ್ರಮದಲ್ಲಿ 8 ರಿಂದ 10ನೇ ತರಗತಿ ಹಾಗೂ 11 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚಿತ್ರಕಲೆ(Art), ಪ್ರಬಂಧ(Essay), ಚರ್ಚಾ ಸ್ಪರ್ಧೆ (Debate), ಆಯ್ಕೆ ಮತ್ತು ಭಾಷಣ (Pick and Speak), ಮೈಮ್ ಅಭಿನಯ (Mime Act), ರಸಪ್ರಶ್ನೆ (Quiz) ಮತ್ತು ಪದ ಉಚ್ಚಾರಣೆ (Spelling Bee).ಈ ಕಾರ್ಯಕ್ರಮಕ್ಕೆ ಮೈಸೂರಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಆಹ್ವಾನಿಸಲಾಗಿದೆ.
ದಿನಾಂಕ 7-11-2024 ರಂದು ಬೆಳಗ್ಗೆ 10 ಗಂಟೆಗೆ ಕ.ರಾ.ಮು.ವಿ ಕಾವೇರಿ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ದಿನಾಂಕ 8- 11-2024 ರಂದು ಮಧ್ಯಾಹ್ನ 3:30ಗೆ ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
Key words: KSOU, Art and Mind Fest, Program, competitions