ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ: ಶಾಸಕರಿಂದ ನೂಕಾಟ ತಳ್ಳಾಟ, ಭಾರಿ ಕೋಲಾಹಲ ಸೃಷ್ಠಿ

ನವದೆಹಲಿ,ನವೆಂಬರ್,7,2024 (www.justkannada.in): ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದ್ದು  ಶಾಸಕರು ನೂಕಾಟ ತಳ್ಳಾಟ ನಡೆಸಿ, ಭಾರಿ ಕೋಲಾಹಲ ಸೃಷ್ಠಿಯಾದ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಗೊತ್ತುವಳಿಯನ್ನು ಭಾರಿ ಗದ್ದಲದ ನಡುವೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ಸಂವಿಧಾನದ 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿ ಶಾಸಕರ ನಡುವೆ ತಳ್ಳಾಟ ನೂಕಾಟ ನಡೆಯಿತು. ಗದ್ದಲದ ನಂತರ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಪ್ರತ್ಯೇಕಿಸಿದರು.

ಜಮ್ಮುಕಾಶ್ಮೀರ ವಿಧಾನಸಭೆ ಕಲಾಪದಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಗೊತ್ತುವಳಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪದ ಪಟ್ಟಿಯಲ್ಲಿ ಇರದ ವಿಷಯುವನ್ನು ಮಂಡಿಸಲಾಗಿದೆ. ನಾವು ಇದನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಈ ಮಧ್ಯೆ ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ ಬ್ಯಾನರ್ ಪ್ರದರ್ಶಿಸಿದ್ದು,  ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾನರ್​ ಕಿತ್ತುಕೊಳ್ಳಲು ಬಿಜೆಪಿ ಶಾಸಕರು ಮುಂದಾಗಿದ್ದು ಈ ವೇಳೆ , ಬಿಜೆಪಿ,  ಪಿಡಿಪಿ, ಎನ್​ಸಿ ಶಾಸಕರು  ನಡುವೆ ಹೊಡೆದಾಟ, ತಳ್ಳಾಟ ನೂಕಾಟ ನಡೆದು ಕೋಲಾಹಲ ಸೃಷ್ಠಿಯಾಯಿತು.

Key words: Jammu-Kashmir, Legislative Assembly, MLAs