ಮೈಸೂರು,ನವೆಂಬರ್,7,2024 (www.justkannada.in): ಮುಡಾದಲ್ಲಿನ 50:50 ಅನುಪಾತದ ಅಕ್ರಮ ಸೈಟ್ ಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮುಡಾ ಸಭೆಗೂ ಮುನ್ನ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, 50: 50 ಅನುಪಾತ ರದ್ದು ಮಾಡಿ ಅಂತಾ ನಾನು ಹೇಳಲ್ಲ. ಆದರೆ ಮುಡಾ 50: 50 ಅಕ್ರಮ ಸೈಟ್ ಗಳನ್ನ ವಾಪಸ್ ಪಡೆಯಬೇಕು. ಅಕ್ರಮವಾಗಿ ನೀಡಿರುವ ನಿವೇಶನಗಳನ್ನ ವಾಪಸ್ ಪಡೆಯಲಿ ಎಂದು ಹೇಳಿದರು.
50: 50 ಅನುಪಾತದಲ್ಲಿ ಅಕ್ರಮವಾಗಿ ನೀಡಿರುವ ಸೈಟ್ ರದ್ದು ಪಡಿಸಬೇಕು. ಮುಡಾ 50: 50 ಅನುಪಾತ ರದ್ದು ಮಾಡಿ ಎಂದು ಹೇಳಲ್ಲ. 50:50 ಅನುಪಾತದಡಿ ಸೈಟ್ ನೀಡಬೇಕು ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದರು.
Key words: Abolish, illegal site, MUDA, MLA, GT Deve Gowda