ಬೆಂಗಳೂರು, ನ.08,2024: (www.justkannada.in news) ರೈತರೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ಧಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ವೆಬ್ ಪೋರ್ಟಲ್ ನ ಇಬ್ಬರು ಸಂಪಾದಕರ ವಿರುದ್ಧ ಪ್ರಕರಣ ದಾಖಲು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರ ಸೊಶಿಯಲ್ ಮಿಡಿಯಾವಾದ @tejasvi_surya ಎಂಬ ‘X’ ಖಾತೆಯಲ್ಲಿ A farmer in Haveri commits suicide after finding his land is taken over by Waqf!, In their haste to appease minorities, CM @siddaramaiah and minister @BZZameerAhmedK have unleashed catastrophic effects in Karnataka that are becoming impossible to contain with every passing day ಅಂತಾ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ್ದರು.
ಇದನ್ನು ಎರಡು ವೆಬ್ ಪೋರ್ಟಲ್ ಗಳು ತಮ್ಮ E-Paper ಗಳಲ್ಲಿ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು: ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶಿರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದರು. ಜತೆಗೆ “ಹಾವೇರಿ: ಜಮೀನಿನ ಪಹಣಿಯಲ್ಲಿ ವಕ್ಷ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ರೈತರು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರೈತರು ಆರೋಪಿಸಿರುತ್ತಾರೆ. 8 ವರ್ಷಗಳ ಹಿಂದೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾವೇರಿಯ ರೈತರು ಆರೋಪಿಸಿದ್ದಾರೆ. ಸಧ್ಯ ರೈತರು ವಕ್ಷ ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದರು.
ಈ ಸಂಬಂಧ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಸದ ತೇಜಸ್ವಿ ಸೂರ್ಯ ಅವರನ್ನು ಎ-೧ ಎಂದು ಹಾಗೂ ವೆಬ್ ಪೋರ್ಟಲ್ ಸಂಪಾದಕರನ್ನು ಎ-೨, ಎ-೩ ಎಂದು ಎಫ್. ಐ. ಆರ್ . ನಲ್ಲಿ ನಮೂದಿಸಲಾಗಿದೆ.
KEY WORDS: Fake News, social media, F.I.R, BJP MP Tejaswi Surya, web portal editor.!
Fake News on social media: F.I.R filed against both BJP MP Tejaswi Surya and web portal editor.!