ನರೇಂದ್ರ ಮೋದಿ ಅವರಷ್ಟು ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು ,ನವೆಂಬರ್,8,2024 (www.justkannada.in): ಕಪ್ಪು ಹಣ ತರುವುದಕ್ಕಾಗಿ ನೋಟು ಅಮಾನ್ಯೀಕರಣ ಮಾಡಿದ್ದೇವೆ ಎಂದರು. ಆದರೆ ಕಪು ಹಣ ವಾಪಸ್ ಬಂತಾ? ನರೇಂದ್ರ ಮೋದಿ ಅವರಷ್ಟು ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇಂದು ನವೆಂಬರ್ 8 ನೋಟು ಅಮಾನೀಕರಣ ವರ್ಷಾಚರಣೆ. ಬಿಜೆಪಿಯವರು ಇದರ ಸಂಭ್ರಮಾಚರಣೆ ಮಾಡಿದ್ದೀರಾ? ಇಲ್ಲ. ಕಪ್ಪು ಹಣ ವಾಪಸ್ ತರಲು ನೋಟು ಅಮಾನೀಕರಣ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ಕಪು ಹಣ ವಾಪಸ್ ಬಂತಾ? ಬ್ಯಾಂಕ್ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ನಿಂತವರು ಎಷ್ಟು ಜನ ಹೇಳಿ? ನರೇಂದ್ರ ಮೋದಿ ಅವರಷ್ಟು ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ. ನರೇಂದ್ರ ಮೋದಿ ಬಿಜೆಪಿಯವರು ಸುಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ  ಎಂದು ಗುಡುಗಿದರು.

ರಾಜ್ಯದಲ್ಲಿ ನಾವು ವಕ್ಫ್ ಆಸ್ತಿ ಪತ್ತೆ ಹಚ್ಚಿ ರಕ್ಷಣೆ ಮಾಡುತ್ತೇವೆ. ಜಿಪಿಎಸ್ ಮಾದರಿಯಲ್ಲಿ ವಕ್ಫ್ ಆಸ್ತಿಯನ್ನು ಪತ್ತೆ ಹಚ್ಚುತ್ತೇವೆ ವಕ್ಫ್ ಆಸ್ತಿ ಒತ್ತುವರಿ ಮಾಡುವುದಾಗಿ ನಿಮ್ಮ ಸರ್ಕಾರ ಹೇಳಿತ್ತು ಎಂದು ಕಿಡಿಕಾರಿದ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯಕ್ಕೆ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ , ಅದು ಜಂಟಿ ಸದನ ಸಮಿತಿ ಅಲ್ಲ. ಬಿಜೆಪಿ ಸಮಿತಿ. ಅವರೊಬ್ಬರೇ ಹೇಗೆ ಬಂದರು?ಸ ಮಿತಿ ಸದಸ್ಯರು ಯಾಕೆ ಬರಲಿಲ್ಲ ಜಂಟಿ ಸಮಿತಿ ಸದನ ಸಮಿತಿಯ ರಾಜಕೀಯ ಪ್ರೇರಿತವಾಗಿದೆ ಎಂದು ಟೀಕಿಸಿದರು.

Key words:  liar, Narendra Modi, minister, Priyank Kharge