ಮೈಸೂರು,ನವೆಂಬರ್,12,2024 (www.justkannada.in): ವಿಪಕ್ಷಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾನೂನಿನ ಮೂಲಕ ಎಲ್ಲವನ್ನ ನಾವು ಎದುರಿಸುತ್ತೇವೆ. ಈಗ ಕೇಂದ್ರ ಬಿಜೆಪಿಯ ಅಣತೆಯಂತೆ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ನಾಯಕರ ಮೇಲು ಸಾಕಷ್ಟು ಭ್ರಷ್ಟಾಚಾರ ಆರೋಪ ಇದೆ. ಇದರ ಬಗ್ಗೆ ತನಿಖೆ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ. ಇದನ್ನ ಬಿಟ್ಟು ಸಿಎಂ ಮೇಲೆ ವಿಪಕ್ಷಗಳು ಆರೋಪ ಮಾಡುತ್ತಿವೆ. ಕೇಂದ್ರ ಸರ್ಕಾರ ವಿಪಕ್ಷಗಳ ಮೇಲೆ ಮಾಡುತ್ತಿರುವ ಆರೋಪಕ್ಕೆ ನಾವು ತಿರುಗೇಟು ನೀಡಬೇಕು. ಬಡವರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್ ಪರವಾಗಿ ನೀವು ಇರಬೇಕು. ನೀವೆಲ್ಲರೂ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು ಎಂದು ಹೇಳಿದರು.
ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಇದಕ್ಕೆಲ್ಲ ಕಾರಣ ಸಿಎಂ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು. ಅನಿಲ್ ಚಿಕ್ಕಮಾದುರನ್ನ ಎರಡನೇ ಬಾರಿಗೆ ಗೆಲ್ಲಿಸೋಕೆ ಅವರು ಮಾಡಿರುವ ಅಭಿವೃದ್ಧಿಗಳೇ ಸಾಕ್ಷಿಯಾಗಿವೆ. ಶಾಸಕರಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸದಾ ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅನಿಲ್ ಚಿಕ್ಕಮಾದು ರವರ ಮೇಲೆ ನಿಮ್ಮ ಆಶೀರ್ವಾದ ಯಾವಾಗಲು ಇರಲಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೇಲ್ವರ್ಗದವರು ನಮ್ಮನ್ನ ಒಡೆದು ಆಳಲು ಮುಂದಾಗುತ್ತಾರೆ. ಹಾಗಾಗಿ ಹಿಂದುಳಿದ ವರ್ಗದವರು ನಾವೆಲ್ಲರೂ ಒಂದಾಗಬೇಕು. ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಭರವಸೆ ನೀಡಿದ್ದೆವು. ಇದೆಲ್ಲವನ್ನ ಅಧಿಕಾರಕ್ಕೆ ಬಂದ ಹತ್ತೇ ತಿಂಗಳ ಒಳಗೆ ಜಾರಿ ಮಾಡಿದ್ದೇವೆ. ಇಂತಹ ಗ್ಯಾರಂಟಿ ಯೋಜನೆ ನೀಡಿದ ಸಿದ್ದರಾಮಯ್ಯನವರಿಗೆ ಧನ್ಯವಾದ ತಿಳಿಸೋಣ. ಗ್ಯಾರಂಟಿ ಯೋಜನೆ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮಾಜಕ್ಕೂ ಗ್ಯಾರಂಟಿ ಯೋಜನೆ ತಲುಪುತ್ತಿದೆ ಎಂದು ನುಡಿದರು.
Key words: investigative, agencies, BJP, MLC, Dr. Yatindra Siddaramaiah