ಮೈಸೂರು,ನವೆಂಬರ್,13,2024 (www.justkannada.in): ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರನ್ನ ಅತಿ ಹೆಚ್ಚು ಅಭಿವೃದ್ಧಿ ಮಾಡಿದ್ದೂ ಸಿಎಂ ಸಿದ್ದರಾಮಯ್ಯನವರು ಎಂದು ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಹಾಡಿ ಹೊಗಳಿದರು.
ಮೈಸೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ, 2013ರಿಂದ 2018ರವರೆಗೆ ನೂತನ ಮಹಾರಾಣಿ ಕಾಲೇಜು ಕಟ್ಟಿಕೊಟ್ಟಿದ್ದನ್ನ ನಾವು ನೆನೆಯಬೇಕು. ಹಿಂದೆ ಇದ್ದ ಸರ್ಕಾರ ಮೈಸೂರಿಗೆ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ. ಮಹಾರಾಣಿ ಕಾಲೇಜನ್ನ ಅಭಿವೃದ್ಧಿ ಮಾಡಲು ಮುಂದಾಗಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮಹಾರಾಣಿ ಕಾಲೇಜಿನ ಸಮಸ್ಯೆ ವೀಕ್ಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಶಿಕ್ಷಣಕ್ಕೆ 219 ಕೋಟಿ ಬಿಡುಗಡೆ ಮಾಡಿದರು. ಮಹಾರಾಣಿ ಕಾಲೇಜಿನ 1600 ವಿದ್ಯಾರ್ಥಿಗಳು ಉಳಿದುಕೊಳ್ಳಲು ಹಾಸ್ಟೆಲ್ ಗೆ 170 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮೋದಿಯವರು ಬೇಟಿ ಬಚಾವೋ ಭೇಟಿ ಪಡವೋ ಎನ್ನುತ್ತಾರೆ. ಅವರು ಕೇವಲ ಮಾತಿಗೆ ಮಾತ್ರ ಸೀಮಿತರಾಗಿದ್ದಾರೆ. ಮೈಸೂರಿಗೆ ಅತಿ ಹೆಚ್ಚಿನ ಅನುದಾನ ನೀಡಿರೋದು ಸಿದ್ದರಾಮಯ್ಯನವರು. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರನ್ನ ಅತಿ ಹೆಚ್ಚು ಅಭಿವೃದ್ಧಿ ಮಾಡಿದ್ದೂ ಸಿದ್ದರಾಮಯ್ಯನವರು ಎಂದು ಗುಣಗಾನ ಮಾಡಿದರು.
ಹಾಗೆಯೇ ಕೆಆರ್ ಆಸ್ಪತ್ರೆ ರಸ್ತೆಯಿಂದ ಮೇಟಗಳ್ಳಿ ಮೂಲಕ ಹೋಗುವ ಯಾವುದಾದರೂ ರಸ್ತೆಗೆ ಸಿಎಂ ಹೆಸರಿಡಬೇಕು ಎಂದು ಶಾಸಕ ಹರೀಶ್ ಗೌಡ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.
Key words: MLA, Harish Gowda, praised, CM Siddaramaiah, Mysore