ಮೈಸೂರು,ನವೆಂಬರ್,15,2024 (www.justkannada.in): ತಾಯಿ ಚಾಮುಂಡೇಶ್ವರಿ ಮುಂದೆ ನಿಂತು ಹೇಳುತ್ತಿದ್ದೇನೆ ನಾನು ಜಮೀರ್ ಅಹ್ಮದ್ ಖಾನ್ ರನ್ನು ಕುಳ್ಳ ಎಂದು ಕರೆದೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಇಂದು ಉಪಚುನಾವಣೆ ಮುಗಿದ ಹಿನ್ನೆಲೆ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪುತ್ರ ನಿಖಿಲ್ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ .ಡಿ ಕುಮಾರಸ್ವಾಮಿ, ಜಮೀರ್ ಅಹ್ಮದ್ ಖಾನ್ ರನ್ನು ನಾನು ಕುಳ್ಳ ಎಂದು ಕರೆದೇ ಇಲ್ಲ. ತಾಯಿ ಮುಂದೆ ನಿಂತಿದ್ದೇನೆ ನಾನು ಕುಳ್ಳ ಎಂದು ಕರೆದೆ ಇಲ್ಲ. ಬಸವರಾಜ್ ಹೊರಟ್ಟಿ ಅವರು ಕುಮಾರ್ ಎಂದಾಗ ಹೊಡೆಯಲು ಹೋದ ಗಿರಾಕಿ. ಬಸವರಾಜ್ ಹೊರಟ್ಟಿ ಈಗಲೂ ಇದ್ದಾರೆ ಅವರನ್ನೇ ಕೇಳಿ. ಜಮೀರ್ ಅಹಮದ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.ಇದು ನಾಗರೀಕ ಸರ್ಕಾರನಾ? ಎಂದು ಕಿಡಿಕಾರಿದರು.
ಗರ್ವಭಂಗ ಸೊಕ್ಕು ಎಂಬುದು ಅಸಂವಿಧಾನಿಕ ಪದ ಅಲ್ಲ. ನನ್ನ ಜಮೀರ್ ಆತ್ಮಿಯತೆ ರಾಜಕೀಯದಲ್ಲಿ ಮಾತ್ರ ಅಮಾಯಕರು ಇಂತಹ ಹೇಳಿಕೆ ಕೊಟ್ಟರೇ ಜೈಲಿಗೆ ಕಳುಹಿಸುತ್ತಾರೆ. ಯಾವ ಸಮಯದಲ್ಲಿ ಯಾರ ಕಾಲು ಹಿಡಿದಿದ್ದಾರೆ ಎಂದು ಗೊತ್ತಿಲ್ವಾ. ಚಲುವ ಅಂತಾ ಕರೆದಿಲ್ವಾ ಅಂತಾರೆ. ಇದು ಅವರ ಸಂಸ್ಕೃತಿ ಚನ್ನಪಟ್ಟಣ ಜನ ನಮಗೆ ಆಶೀರ್ವಾದ ಮಾಡಿದ್ದಾರೆ . ಚನ್ನಪಟ್ಟಣದಲ್ಲಿ ಉತ್ತಮವಾದ ರೀತಿಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: Mysore, Chamundi hills, Central Minister, HDK